ಕೊಕೈನ್ ಮಾರಾಟ: ವಿದೇಶಿ ಪ್ರಜೆ ಸೆರೆ
Update: 2017-05-14 22:45 IST
ಬೆಂಗಳೂರು, ಮೇ 14: ಮಾದಕ ವಸ್ತು ಕೊಕೈನ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಝೀರಿಯಾ ದೇಶದ ಓಬೀಗೊ(34) ಬಂಧಿತ ವಿದೇಶಿ ಪ್ರಜೆ ಎಂದು ಸಿಸಿಬಿ ತಿಳಿಸಿದೆ.
ನಗರದ ಭಟ್ಟರ ಹಳ್ಳಿಯ ಕೀತಗನೂರು ಮುಖ್ಯರಸ್ತೆಯಲ್ಲಿರುವ ಕಾಲೇಜಿನ ಬಳಿ ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಓಬೀಗೊ ಇಲ್ಲಿನ ಹಾಲಹಳ್ಳಿಯಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ. ಈತನ ಬಳಿಯಿದ್ದ 42.5 ಗ್ರಾಂ ಮಾದಕ ವಸ್ತು, ಬೈಕ್, ಮೊಬೈಲ್ ವಶಕ್ಕೆ ಪಡೆದು ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.