ಕಳವು ಪ್ರಕರಣ: ಇಬ್ಬರು ನೇಪಾಳಿ ಪ್ರಜೆಗಳ ಬಂಧನ
Update: 2017-05-15 20:15 IST
ಬೆಂಗಳೂರು, ಮೇ 15: ಕಳ್ಳತನ ಪ್ರಕರಣದ ಆರೋಪದಲ್ಲಿ ಇಬ್ಬರು ನೇಪಾಳಿ ಪ್ರಜೆಗಳನ್ನು ಬಂಧಿಸಿ, 2.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನೇಪಾಳದ ಬಜಾಂಗ್ ಜಿಲ್ಲೆಯ ನಿವಾಸಿಗಳಾದ ಗಣೇಶ್ ಬಹದ್ದೂರ್ ರೊಕಾಯ (34), ನರೇಂದ್ರ ಬಹದ್ದೂರ್ ತಾಪ (39) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಚಿನ್ನಾಭರಣ, ವಾಚು, ಕ್ಯಾಮರಾ, ಲ್ಯಾಪ್‌ಟಾಪ್ ಹಾಗೂ 6 ಸಾವಿರ ರೂ. ನಗದು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಪುಲಿಕೇಶಿನಗರ, ವಿಜಯನಗರ, ಕೆ.ಎಸ್.ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಕಳವು ಪ್ರಕರಣ, ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಕಳವು ಪ್ರಕರಣಗಳು ಈ ಆರೋಪಿಗಳ ವಿರುದ್ಧ ದಾಖಲಾಗಿವೆ.