ಸರ್ವರ್ ಡೌನ್: ಜನರಿಗೆ ತೊಂದರೆ
ಬೆಂಗಳೂರು, ಮೇ 16: ಪಡಿತರ ಚೀಟಿಗೆ ಆಧಾರ ಕಾರ್ಡ್ ಲಿಂಕ್ ಮಾಡುವ ಸರ್ವರ್‌ಗಳು ಡೌನ್ ಆಗುತ್ತಿದ್ದು, ಇದರಿಂದ, ಜನರು ಬೆಂಗಳೂರು ಒನ್‌ಗಳಿಗೆ ಪದೇ ಪದೇ ಅಲೆದಾಡುವಂತಹ ಪರಿಸ್ಥಿತಿ ಉದ್ಭವಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದಲೂ ಮಲ್ಲೇಶ್ವರಂನ ಹದಿನೆಂಟನೆ ಕ್ರಾಸ್‌ನಲ್ಲಿರುವ ಬೆಂಗಳೂರು ಒನ್‌ಗೆ ನೂರಾರು ಸಂಖ್ಯೆಯಲ್ಲಿರುವ ಪಡಿತರದಾರರು ಆಧಾರ ಲಿಂಕ್ ಮಾಡಿಸಲು ಬರುತ್ತಿದ್ದಾರೆ. ಆದರೆ, ಲಿಂಕ್ ಮಾಡಿಸಲು ಮುಂದಾಗುತ್ತಿದ್ದಂತೆಯೇ ಸರ್ವರ್ ಡೌನ್ ಆಗುತ್ತಿದೆ. ಇದರಿಂದ, ಬೇಸರಗೊಂಡಿರುವ ಪಡಿತರದಾರರು ಬೆಂಗಳೂರು ಒನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ವರ್ ಡೌನ್ ಆಗುತ್ತಿರುವ ಸಮಸ್ಯೆಯನ್ನು ಯಾವಾಗ ಪರಿಹರಿಸುತ್ತೀರಿ ಎಂದು ಪಡಿತರರು ಬೆಂಗಳೂರು ಒನ್‌ನಲ್ಲಿರುವ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಈ ನಂಬರ್‌ಗೆ ಕಾಲ್ ಮಾಡಿ ಬನ್ನಿ ಎಂದು ಹೇಳುವ ಮೂಲಕ ಪಡಿತರದಾರರಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತ ಪಡಿಸುತ್ತಿದ್ದಾರೆ.
‘ಬೆಂಗಳೂರು ಒನ್‌ನವರು ಶನಿವಾರದಿಂದಲೇ ಸರ್ವರ್ ಡೌನ್ ಎಂದು ಹೇಳುತ್ತಿದ್ದಾರೆ. ಇದರಿಂದ, ಇಲ್ಲಿಗೆ ಪ್ರತಿ ದಿನ ಬಂದು ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಈ ಸಮಸ್ಯೆ ಬಗೆ ಹರಿದರೆ ಪಡಿತರವನ್ನು ಹಿಡಿದುಕೊಂಡು ಇಲ್ಲಿಗೆ ಪದೇ ಪದೇ ಬರುವುದು ತಪ್ಪುತ್ತದೆ.’
-ರೂಪಾ, ವಯಾಲಿ ಕಾವಲ್
‘ನಾಲ್ಕು ತಿಂಗಳಿನಿಂದ ಬೆಂಗಳೂರು ಒನ್‌ಗೆ ಬರುತ್ತಿದ್ದೇನೆ. ಆದರೂ ಸರ್ವರ್ ಡೌನ್ ಎಂಬ ನೆಪ ಹೇಳಿ ತಮ್ಮನ್ನು ಮನೆಗೆ ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದ, ನನಗೆ ಭಾರೀ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗೆಹರಿದರೆ ಅನುಕೂಲವಾಗುತ್ತದೆ.’
-ಸುಮಿತ್ರಾ, ಬಿಇಎಲ್ ಸರ್ಕಲ್