×
Ad

ಅವೈಜ್ಞಾನಿಕ ‘ಪಾತಾಳ ಗಂಗೆ’ ಬದಲಿಗೆ ಅಂತರ್ಜಲ ವೃದ್ಧಿಗೆ ಆದ್ಯತೆ: ಕಾನೂನು ಸಚಿವ ಜಯಚಂದ್ರ

Update: 2017-05-16 21:16 IST

ಬೆಂಗಳೂರು, ಮೇ 16: ನೆಲದ ಆಳದಿಂದ ನೀರನ್ನು ಮೇಲೆತ್ತುವ ‘ಪಾತಾಳ ಗಂಗೆ’ ಯೋಜನೆ ಅವೈಜ್ಞಾನಿಕ. ಇದರಿಂದ ಯಾವುದೇ ಪ್ರಯೋಜ ನವಿಲ್ಲ. ಬದಲಿಗೆ ಅಂತರ್ಜಲ ವೃದ್ಧಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಂತರ್ಜಲ ವೃದ್ಧಿಸಬೇಕೆ ಹೊರತು ‘ಪಾತಾಳ ಗಂಗೆ’ ಅವೈಜ್ಞಾನಿಕ ಯೋಜನೆಗಳಿಂದ ಜನರಿಗೆ ಒಳಿತಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಕನಸಿಗೆ ತಣ್ಣಿರೆರಚಿದರು.

ಈ ಹಿಂದೆ ಎಲ್ಲ ಕಡೆಗಳಲ್ಲಿ ತೆರೆದ ಬಾವಿಗಳು ಇರುತ್ತಿದ್ದವು. ಆ ಬಾವಿಗಳಲ್ಲಿ ಸದಾ ಕಾಲ ನೀರಿರುತ್ತಿತ್ತು. ಆ ನೀರನ್ನು ಬಳಸಿ ಹಣ್ಣು-ತರಕಾರಿ ಬೆಳೆಯಲಾಗುತ್ತಿತ್ತು. ಅದೇ ನೀರನ್ನು ಜನರು ಸೇವನೆ ಮಾಡುತ್ತಿದ್ದರು. ಜನರಿಗೆ ಯಾವುದೇ ರೋಗಗಳು ಬರುತ್ತಿರಲಿಲ್ಲ.
ಇದೀಗ ಎಲ್ಲ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆದು ನೆಲದ ಆಳದಿಂದ ನೀರನ್ನು ತೆಗೆದು ಅದನ್ನು ಬಳಸಿ ಹಣ್ಣು-ತರಕಾರಿ, ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದು, ಇದರಿಂದ ಜನರಿಗೆ ಕಾಯಿಲೆಗಳು, ಗಿಡ-ಮರಗಳಿಗೂ ರೋಗ ಹರಡುವ ಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
 ಕೆರೆಗಳ ಪುನರುಜ್ಜೀವನ: ರಾಜ್ಯದಲ್ಲಿ ಬರ ಸ್ಥಿತಿ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೆರೆಗಳ ಪುನರುಜ್ಜೀವನ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಆಸಕ್ತಿ ವಹಿಸಿದೆ ಎಂದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಕರೆಗಳ ಹೂಳೆತ್ತಲು 100 ಕೋಟಿ ರೂ. ಮೀಸಲಿರಿಸ ಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News