ಮಾದಕ ವಸ್ತು ಮಾರಾಟ: ವಿದೇಶಿ ಮಹಿಳೆ ಸೇರಿ ನಾಲ್ವರ ಸೆರೆ

Update: 2017-05-17 16:11 GMT

ಬೆಂಗಳೂರು, ಮೇ 17: ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ವಿದೇಶಿ ಮಹಿಳೆ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ದೇಶದ ಸುಝಾನಿ(59), ಪೀಟರ್ ಚಿಡಿಬೀರ್(34), ಫ್ರಾಂಕ್ಲಿನ್ ಕೆಲಿಚಿ(33), ಸೇವಿಯರ್ ಚಿಕ್ವಾಡೊ(26) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ನಗರದ ಕೆಆರ್ ಪುರಂ ವ್ಯಾಪ್ತಿಯ ಟಿಸಿ ಪಾಳ್ಯ ಮುಖ್ಯರಸ್ತೆಯ ಕೆವಿಆರ್ ಟವರ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಆರೋಪಿಗಳಿಂದ 26 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 18 ಮೊಬೈಲ್ ಗಳು, ನಾಲ್ಕು ಲ್ಯಾಪ್‌ಟಾಪ್‌ಗಳು, ಪೆನ್‌ಡ್ರೈವ್, ಕಾರು, ಬೈಕ್ ಹಾಗೂ 2,500 ರೂ. ನಗದು, ಸುಮಾರು 200 ಗ್ರಾಂ ತೂಕದ ಮಾದಕ ವಸ್ತು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಆರೋಪಿಗಳ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News