ನಾನಾಜಿ ಥಾಲಿ ಹಳೆ ಪದ್ಧತಿಗೆ ಹೊಸ ಹೆಸರು

Update: 2017-05-19 13:18 GMT

‘ಋತುಮಾನದ ಉತ್ಪನ್ನ ಕೇಂದ್ರೀಕೃತ ಆರೋಗ್ಯಕರ, ಸ್ಥಳೀಯ, ಪುಟ್ಟ ಬಟ್ಟಲು’. ಹೊಲದಿಂದ ಟೇಬಲ್ ಮೆನುಗಳನ್ನು ತಲುಪಿಸುವ ಪಶ್ಚಿಮ ಕರಾವಳಿಯ ಶೆಪ್ ಅವರ ಆಕರ್ಷಕ ಪ್ರಚಾರ ವಾಕ್ಯ ಇದು ಎಂದು ನಿಮಗೆ ಅನಿಸಬಹುದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿತ ಚಿಂತಕರ ಚಾವಡಿಎನಿಸಿದ ದೀನದಯಾಳ್ ಸಂಶೋಧನಾ ಸಂಸ್ಥೆ ಕೂಡಾ ದೇಶದ ಪೌಷ್ಟಿಕತೆಯ ಅಗತ್ಯ ಪೂರೈಸಲು ಇದೇ ಯೋಚನೆಯನ್ನು ಮುಂದಿಟ್ಟಿದ್ದು, ಇದನ್ನು ‘ನಾನಾಜಿ ಥಾಲೀಸ್’ ಎಂದು ಕರೆದಿದೆ.

ಈ ಸಂಸ್ಥೆ ಜೂನ್ 23 ಮತ್ತು 24ರಂದು ಈ ಬಗ್ಗೆ ಶಿಲ್ಲಾಂಗ್ ನಲ್ಲಿ ಕಾರ್ಯಾಗಾರವನ್ನೂ ಹಮ್ಮಿಕೊಂಡಿದೆ. ಕೃಷಿ ಸಚಿವಾಲಯ ಅಧಿಕಾರಿಗಳು, ಪೌಷ್ಟಿಕಾಂಶ ತಜ್ಞರು, ಸಮಾಜ ವಿಜ್ಞಾನಿಗಳು ದೇಶದ ಆಹಾರ ಭದ್ರತೆ ಸಮಸ್ಯೆಯನ್ನು ಬಗೆಹರಿ ಸುವ ಸಲುವಾಗಿ ಪ್ರಾದೇಶಿಕ ಆಹಾರದ ಪೌಷ್ಟಿಕಾಂಶ ವೌಲ್ಯಗಳನ್ನು ಬಿಂಬಿಸಲಿದ್ದಾರೆ. ಈ ಊಟಕ್ಕೆ ಭಾರತೀಯ ಜನಸಂಘದ ಮುಖಂಡ ಹಾಗೂ ಗ್ರಾಮೀಣ ಸ್ವಾವಲಂಬನೆ ಕಾರ್ಯಕರ್ತ ನಾನಾಜಿ ದೇಶಮುಖ್ ಅವರ ಹೆಸರಿಡಲು ನಿರ್ಧರಿಸಲಾಗಿದೆ.

ಮೊಟ್ಟಮೊದಲ ಬಾರಿಗೆ ಸ್ಥಳೀಯ ಆಹಾರದ ಪೌಷ್ಟಿಕ ಹಾಗೂ ಪರಿಸರಾತ್ಮಕ ಪ್ರಯೋಜನವನ್ನು ಬಿಂಬಿಸಿದ್ದು ದೀನದಯಾಳ್ ಸಂಶೋಧನಾ ಸಂಸ್ಥೆ ಮತ್ತು ಹಿಪ್‌ಸ್ಟರ್ ಕೊಲ್ಲಿ ಪ್ರದೇಶ. ಎಲ್ಲ ಬಗೆಯ ಪ್ರಾದೇಶಿಕ ಹಾಗೂ ಋತುಮಾನದ ಆಹಾರ ಪದಾರ್ಥ ಗಳು ವಿಶ್ವದ ಎಲ್ಲೆಡೆ, ವರ್ಷವಿಡೀ ಲಭ್ಯವಾಗುವಂತೆ ಮಾಡಿದ ಕೈಗಾರಿಕೀಕರಣದ ಈ ಪ್ರಯತ್ನವನ್ನು ಹೊಗಳಲೇಬೇಕು. ಜತೆಗೆ ಇಂಗಾಲದ ಹೆಜ್ಜೆಗುರುತಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ಪ್ರಯತ್ನ ಶ್ಲಾಘನೀಯ.

ಈ ಸದುದ್ದೇಶದ ಹೊರತಾಗಿಯೂ, ಸಂಸ್ಥೆಯ ಈ ಯೋಜನೆ ಒಂದು ಸಹಜ ಪ್ರಶ್ನೆ ಹುಟ್ಟಿಸಿದೆ. ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಈ ಪ್ರಾದೇಶಿಕ ಆಹಾರ ಪದ್ಧತಿಯನ್ನು ಬೆಳೆಸಲು ಆರೆಸ್ಸೆಸ್‌ನ ಈ ಮುಖಂಡ ಯಾವುದೇ ರೀತಿಯಲ್ಲಿ ನೆರವಾಗದಿದ್ದರೂ, ಅವರ ಹೆಸರನ್ನು ಈ ಯೋಜನೆಗೆ ಇಡುವ ಅಗತ್ಯವಿ ದೆಯೇ? ದಕ್ಷಿಣ ಏಷ್ಯಾದ ಥಾಲಿ ಸಂಪ್ರದಾಯ, ಭಾರತ ಮೂಲದ್ದು ಎನ್ನುವುದು ಆಕ್ಸ್‌ಫರ್ಡ್ ನಿಘಂಟು 2007ರಲ್ಲಿ ಘೋಷಿಸುವುದಕ್ಕೆ ಮುನ್ನವೇ ಸಾಬೀತಾಗಿತ್ತು.

ಪಶ್ಚಿಮ ಕೇರಳದ ವರ್ಕೆಲಾಗೆ ಇತ್ತೀಚೆಗೆ ಭೇಟಿ ಮಾಡಿದಾಗ, ಬಹುತೇಕ ರೆಸ್ಟೋರೆಂಟ್‌ಗಳಲ್ಲಿ ವಿದೇಶಿ ಪ್ರವಾಸಿಗರಿಗೆ ಅವರ ಮೆನುವಿನ ಖಾದ್ಯಗಳನ್ನು ಉಣಬಡಿ ಸುವ ಭರದಲ್ಲಿ, ಸ್ಥಳೀಯ ಆಹಾರ ನಿರ್ಲಕ್ಷಿಸಿದ್ದು ಕಂಡುಬಂತು.

ಆದರೆ ನಾನು ತಂಗಿದ್ದ ರೆಸಾರ್ಟ್‌ನ ಮಾಲಕ ನನ್ನನ್ನು, ತಮ್ಮ ಪತ್ನಿ ಸಿದ್ಧಪಡಿಸಿದ ಥಾಲಿ ಸವಿಯಲು ಬರುತ್ತೀರಾ ಎಂದು ಪ್ರಶ್ನಿಸಿದಲ್ಲಿಗೆ ಇದು ಬದಲಾಯಿತು.ಮನೆಯೊಡತಿ ಮಾಡಿದ ಅಡುಗೆಯನ್ನು ನೀಡಲು ಯಾರೂ ಮುಂದಾಗಲಾರರು.

ಆದರೆ ನಾನು, ಕುಚ್ಚಲು ಅಕ್ಕಿ ಅನ್ನದ ರಾಶಿಯ ಸುತ್ತ ಆಕರ್ಷಕವಾಗಿ ಜೋಡಿಸಿದ್ದ ವೈವಿಧ್ಯಮಯ ಪಚಡಿ, ಲಘುವಾಗಿ ಬೇಯಿಸಿ ಹುರಿದ ಪಲ್ಯ, ಎಲ್ಲ ಬಗೆಯ ಋತುಮಾನದ ತರಕಾರಿ, ಮಾವಿನ ಉಪ್ಪಿನಕಾಯಿ, ಸ್ಥಳೀಯ ಬೇವಿನ ಎಲೆಯಿಂದ ತಯಾರಿಸಿದ ಚಟ್ನಿಯ ಸವಿ ಸವಿಯಲು ಸಿದ್ಧವಾದೆ. ತಮ್ಮದೇ ತೋಟ ದಲ್ಲಿ ಬೆಳೆದ ಬಾಳೆಹಣ್ಣು ಮತ್ತು ಹಬೆಯಾಡುವ ಪಾಯಸದೊಂದಿಗೆ ಊಟ ಮುಕ್ತಾಯವಾಯಿತು. ದೇಶದಲ್ಲಿ ಇರುವವರೆಗೂ ಇದು ಕೈಗೆಟುಕದ್ದಲ್ಲ ಎಂದು ಯೋಚಿಸುತ್ತಲೇ ಊಟದ ಬಾಳೆ ಎಲೆ ಮಡುಚಿದೆ.

ಥಾಲಿಗಳಲ್ಲಿರುವ ವೈವಿಧ್ಯಮಯ ಪ್ರಕಾರದಿಂದಾಗಿ, ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಇದನ್ನು ವರ್ಗೀಕರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಮಹಾರಾಷ್ಟ್ರದ ಥಾಲಿಯಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವೈವಿಧ್ಯಮಯ ಚಿಲ್ಲೀಸ್ ಸಿಗುತ್ತದೆ. ಕೊಲ್ಲಾಪುರಕ್ಕೆ ಹೋದರೆ, ಮಟನ್ ಅಥವಾ ಚಿಕನ್‌ಗೆ ಕಾಳುಮೆಣಸು ಬೆರೆಸಿದ ಖಾದ್ಯಗಳು ಸಿಗುತ್ತವೆ. ಆದರೆ ಪುಣೆಯ ಜನಪ್ರಿಯ ಶಬ್ರೀ ರೆಸ್ಟೋರೆಂಟ್‌ಗೆ ತೆರಳಿದರೆ, ಮಹಾರಾಷ್ಟ್ರ ಶೈಲಿಯ ಊಟ ಸಂಪೂರ್ಣ ಭಿನ್ನ. ಅದು ಸಸ್ಯಾಹಾರಿ ಎಂದು ಹೇಳುತ್ತಾರೆ.

ಈಶಾನ್ಯಕ್ಕೆ ಪ್ರಯಾಣ ಬೆಳೆಸಿದರೆ, ಥಾಲಿಯಲ್ಲಿ ಬಾಸ್ಮತಿ ಅನ್ನ ಕಾಣಸಿಗುವುದಿಲ್ಲ. ಇದರ ಬದಲು ಕಪ್ಪು, ಕೆಂಪು, ಕೋಲಿನಾಕಾರದ ಅಥವಾ ಇತರ ವೈವಿಧ್ಯಮಯ ವಸ್ತುಗಳು ಕಾಣಿಸುತ್ತವೆ. ಬಹುತೇಕ ಈ ಖಾದ್ಯಗಳು ಭಾರತದ ಬೇರೆಲ್ಲೂ ಸಿಗುವುದಿಲ್ಲ. ಅಸ್ಸಾಮಿ ಥಾಲಿ ಸವಿಯುವುದು ಅಕ್ಕಿ ವೈವಿಧ್ಯದ ಅಧ್ಯಯನ ಎನ್ನಬಹುದು. ಪುಟ್ಟ, ಪುಡಿಮಾಡಿದ ಜೋಹಾ ಅಕ್ಕಿಯಿಂದ ಹಿಡಿದು, ಸಿಹಿ ತಿನಸಿನಲ್ಲಿ ಬೋರಾ ಅಕ್ಕಿ, ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದ ಅಹು ಅಕ್ಕಿ, ಚಳಿಗಾಲದ ಸಾಲಿ ಅಕ್ಕಿ ಹೀಗೆ ವೈವಿಧ್ಯಮಯ ಅಕ್ಕಿ ಕಾಣಸಿಗುತ್ತದೆ. ರಾಜ್ಯದ ಕೃಷಿಕರ ಭವಿಷ್ಯವೇ ಇದರ ಮೇಲೆ ಅವಲಂಬಿತವಾಗಿದೆ.

ಪಶ್ಚಿಮ ಬಂಗಾಳದಲ್ಲಿ ರೆಸ್ಟೋರೆಂಟ್‌ಗಳಿಗಿಂತ ಹೆಚ್ಚಾಗಿ ಮನೆಗಳಲ್ಲಿ ಥಾಲಿ ಸಿಗುತ್ತದೆ. ಅಳಿಯಂದಿರಿಗೆ ವಿಶೇಷ ಥಾಲಿಗೆ ಸಾಕಷ್ಟು ಕಾರಣಗಳು ಸಿಗುತ್ತವೆ. ಉದಾಹರಣೆಗೆ ಹುರಿದ ಖಾದ್ಯ, ಪಲಾವ್, ಲುಚಿ, ಮೀನು ಹಾಗೂ ಮಾಂಸದ ಖಾದ್ಯಗಳು ಊಟದಲ್ಲಿರುತ್ತವೆ. ಇನ್ನೂ ಉತ್ತರಕ್ಕೆ ಹೋದರೆ ರೋಟಿ, ಪರೋಟಾ ಊಟದ ಕೇಂದ್ರಭಾಗವಾಗುತ್ತದೆ. ಆದರೆ ರಾಜಸ್ಥಾನಿ ಥಾಲಿಯಲ್ಲಿ ಮರುಭೂಮಿಯ ಪೊದೆಗಳಿಂದ ಮಾಡಿದ ಪದಾರ್ಥಗಳಿರುತ್ತವೆ. ಉದ್ಯಮಶೀಲ ಗುಜರಾತಿಗಳು, ತಮ್ಮ ಅಪರಿಮಿತ ಭೋಜನದ ಮೂಲಕ ಬಹುರಾಷ್ಟ್ರೀಯ ವಹಿವಾಟು ಮಾಡುತ್ತಿದ್ದಾರೆ.

ಥಾಲಿ ಸವಿಯೋಣ

ಈ ವರ್ಣರಂಜಿತ ಸಂಪ್ರದಾಯದ ಇನ್ನೊಂದು ಮುಖವೆಂದರೆ, ಈ ಥಾಲಿ ಊಟ ಹಾಗೂ ಅದನ್ನು ಬಿಂಬಿಸಿದ ರೀತಿ, ವರ್ಣ, ವರ್ಗ, ಜಾತಿ ಸೂಚಕ. ಭಾರತೀಯ ಆಹಾರ ಮತ್ತು ಥಾಲಿಯ ಪರಿಶುದ್ಧತೆ ಮತ್ತು ಮಾಲಿನ್ಯದ ಅಂಶವನ್ನು ಪ್ರತ್ಯೇಕಿಸುವಂತೆಯೇ ಇಲ್ಲ.

ಪ್ರಾಚ್ಯಶಾಸ್ತ್ರಜ್ಞ ಹಾಗೂ ಇತಿಹಾಸ ತಜ್ಞ ಖತ್ಲೀನ್ ಮಾರಿಸನ್ ಹೇಳಿರು ವಂತೆ ವೃತ್ತಾಕಾರದ, ಬಾಳೆ ಎಲೆ ಆಕಾರದ ಸ್ಟೋನ್ ಥಾಲಿ 10ನೆ ಶತಮಾನ ಗಳ ಹಿಂದೆಯೇ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿತ್ತು. ಇದರಲ್ಲಿ ಅಧಿಕ ಪಾಲು ಅನ್ನ ಹಾಗೂ ಅರೆದ್ರವ ಪದಾರ್ಥಗಳು ಇದ್ದವು. ಮಧ್ಯಕಾಲೀನ ಯುಗದಲ್ಲಿ ಅಕ್ಕಿಯನ್ನು ಮೇಲ್ವರ್ಗದವರ ಹಾಗೂ ಪವಿತ್ರ ಆಹಾರ ಎಂದು ಪರಿಗಣಿಸಲಾಗಿತ್ತು ಹಾಗೂ ತೃಣಧಾನ್ಯದಂಥ ಆಹಾರ ಪದಾರ್ಥಗಳನ್ನು ನಿರ್ಲಕ್ಷಿಸಲಾಗಿತ್ತು.

1960ರ ದಶಕದಲ್ಲಿ ಕರ್ನಾಟಕದ ಉಡುಪಿ ಎಂಎಸ್ ಹೋಟೆಲ್ ಬ್ರಾಹ್ಮಣ ಬೋಜನ ನೀಡಲು ಆರಂಭಿಸಿದಾಗ, ಬಾಳೆ ಎಲೆ ಊಟ ನೀಡಲಾ ಗುತ್ತಿತ್ತು. ವಿದ್ಯಾರ್ಥಿಗಳು, ಪ್ರವಾಸಿಗರು, ಅಧಿಕಾರಿಗಳು ಹೀಗೆ ವಿವಿಧ ವರ್ಗದವರಿಗೆ ಬಳಸುವ ಅಡುಗೆ ಸಾಮಗ್ರಿಗಳು ಕಲಬೆರಕೆಯಾಗದಂತೆ ಎಚ್ಚರ ವಹಿಸಲು ಈ ವಿಧಾನ ಅನುಸರಿಸಲಾಗುತ್ತಿತ್ತು. ದೇಶದ ಎಲ್ಲೆಡೆ, ಮೇಲ್ವರ್ಗದವರೇ ಥಾಲಿ ಸಿದ್ಧಪಡಿಸುವುದು ರೂಢಿಯಲ್ಲಿದೆ. ಆರ್ಥಿಕ ಹಾಗೂ ಸಾಮಾಜಿಕ ರಾಜಧಾನಿಗಳಲ್ಲೇ ಇದು ಅಧಿಕವಾಗಿ ಚಾಲ್ತಿಯಲ್ಲಿದೆ.

ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಥಾಲಿ ಯನ್ನು ಇನ್ನಷ್ಟು ಪೌಷ್ಟಿಕವಾಗಿಸಬಹುದೇ ಎಂಬ ಪ್ರಶ್ನೆಯೇ ಒಂದು ಅಣಕ. ಏಕೆಂದರೆ ಅದನ್ನು ಈಗಾಗಲೇ ಅನುಸರಿಸಲಾಗುತ್ತಿದೆ. ಈಗಾಗಲೇ ಅಸ್ತಿತ್ವದ ಲ್ಲಿರುವ ಪದ್ಧತಿಯನ್ನು ಹೊಸದು ಎಂದು ಬಿಂಬಿಸುವುದಕ್ಕೆ ಶಕ್ತಿ ವ್ಯಯ ಮಾಡುವ ಬದಲು ದೀನದಯಾಳ್ ಸಂಶೋಧನಾ ಸಂಸ್ಥೆಯಂಥ ಸಂಸ್ಥೆ ಗಳು ಕಠಿಣ ಪ್ರಶ್ನೆಗಳಾದ, ಜನರ ಆಹಾರ ಲಭ್ಯತೆಗೆ ಹೇಗೆ ಜಾತಿ, ವರ್ಗ, ರಾಜಕೀಯ ಅಡ್ಡಗೋಡೆಯಾಗುತ್ತದೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಥಾಲಿಗಳಲ್ಲಿರುವ ವೈವಿಧ್ಯಮಯ ಪ್ರಕಾರ ದಿಂದಾಗಿ, ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಇದನ್ನು ವರ್ಗೀಕರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಮಹಾರಾಷ್ಟ್ರದ ಥಾಲಿಯಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವೈವಿಧ್ಯಮಯ ಚಿಲ್ಲೀಸ್ ಸಿಗುತ್ತದೆ. ಕೊಲ್ಲಾಪುರಕ್ಕೆ ಹೋದರೆ, ಮಟನ್ ಅಥವಾ ಚಿಕನ್‌ಗೆ ಕಾಳುಮೆಣಸು ಬೆರೆಸಿದ ಖಾದ್ಯಗಳು ಸಿಗುತ್ತವೆ. ಆದರೆ ಪುಣೆಯ ಜನಪ್ರಿಯ ಶಬ್ರೀ ರೆಸ್ಟೋರೆಂಟ್‌ಗೆ ತೆರಳಿದರೆ, ಮಹಾರಾಷ್ಟ್ರ ಶೈಲಿಯ ಊಟ ಸಂಪೂರ್ಣ ಭಿನ್ನ.

Writer - ಸುಚಿತ್ರಾ ಕಂಜೀಲಾಲ್

contributor

Editor - ಸುಚಿತ್ರಾ ಕಂಜೀಲಾಲ್

contributor

Similar News