×
Ad

ಬೆಂಗಳೂರು: ಇಸುಝು 7 ಸೀಟರ್-ಎಸ್‌ಯುವಿ ‘ಎಂಯು-ಎಕ್ಸ್’ ಕಾರು ಬಿಡುಗಡೆ

Update: 2017-05-19 21:39 IST

ಬೆಂಗಳೂರು, ಮೇ 19: ಇಸುಝು ಮೋಟರ್ಸ್ ಇಂಡಿಯಾ ತನ್ನ ಬಹುನಿರೀಕ್ಷಿತ ಪ್ರೀಮಿಯಂ ಫುಲ್‌ಸೈಝ್ ನ 7 ಸೀಟರ್‌ ಎಸ್‌ಯುವಿಯಾದ ‘ಎಂಯು-ಎಕ್ಸ್’ ಕಾರನ್ನು ಬಿಡುಗಡೆ ಮಾಡಿದೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಕರ್ಷಕ ವಿನ್ಯಾಸ ಮತ್ತು ಬಹು ಸುರಕ್ಷಾ ವೈಶಿಷ್ಟತೆಗಳನ್ನು ಹೊಂದಿರುವ ಎಸ್‌ಯುವಿಯಾದ 7 ಸೀಟರ್ ಎಂಯು-ಎಕ್ಸ್ ಕಾರನ್ನು ಇಸುಜು ಮೋಟರ್ಸ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಹಿಟೋಶಿ ಕೊನೊ ಬಿಡುಗಡೆ ಮಾಡಿದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸುಝು ಎಂಯು-ಎಕ್ಸ್ 130 ಕಿಲೋವ್ಯಾಟ್(177 ಪಿಎಸ್)ನ ವಿದ್ಯುತ್‌ನೊಂದಿಗೆ ಗರಿಷ್ಠ ಮಟ್ಟದ ಶಕ್ತಿಯನ್ನು ನೀಡಲಿದೆ. ಜೊತೆಗೆ ವಿಶೇಷವಾಗಿ ಫ್ಲಾಟ್ ಟ್ರಾಕ್ ತಿರುವನ್ನು ವಿನ್ಯಾಸಗೊಳಿಸಲಾಗಿದ್ದು, ಖರೀದಿಗೆ ಸೂಕ್ತವಾದ ವಾಹನವಾಗಿದೆ ಎಂದರು. ಇಸುಝುನ ಎಂಯು-ಎಕ್ಸ್ ಕಾರನ್ನು ಅತ್ಯುತ್ತಮವಾದ ಶಕ್ತಿಶಾಲಿ ಮತ್ತು ರಸ್ತೆ ದಕ್ಷತೆಯಿಂದ ಕೂಡಿದ ವಿನ್ಯಾಸದಿಂದ ಮಾಡಲಾಗಿದೆ. ಅಲ್ಲದೆ, ಅತಿ ಹೆಚ್ಚು ಜಾಗ ಮತ್ತು ಆರಾಮದಾಯಕವಾದ ಪ್ರಯಾಣದ ಅನುಭವನನ್ನು ನೀಡುತ್ತದೆ ಎಂದ ಅವರು, ಈ ಹೊಸ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

ಟ್ರೈಡೆಂಟ್ ಆಟೊಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಚೌಧರಿ ಮಾತನಾಡಿ, ಇಸುಝು ಮೋಟರ್ಸ್ ಇಂಡಿಯಾದ ಜತೆ ಗ್ರಾಹಕ ತೃಪ್ತಿ ಸೇವೆಗಳ ಬಗ್ಗೆ ಚರ್ಚೆಗಳನ್ನು ನಡೆಸುವ ಮೂಲಕ ನಮ್ಮ ಸಹಭಾಗಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದೇವೆ. ಎಸ್‌ಯುವಿಗಳಿಗೆ ಬೆಂಗಳೂರು ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಹೆಚ್ಚು ಖರೀದಿದಾರರಿದ್ದಾರೆ. ಇಸುಝು ಎಂಯು-ಎಕ್ಸ್(4X2ಎಟಿ ವೇರಿಯೆಂಟ್) ಬೆಂಗಳೂರಿನ ಎಕ್ಸ್‌ಶೋರೂಂನಲ್ಲಿ 24,36,269 ರೂ.ಗೆ ಲಭ್ಯವಿದೆ. ಅದೇ ರೀತಿ, 4X4 ವೇರಿಯೆಂಟ್‌ನ ಎಕ್ಸ್-ಶೋರೂಂ ಬೆಲೆ 26,39,376 ರೂ. ಆಗಿದೆ ಎಂದು ಮಾಹಿತಿ ನೀಡಿದರು.

ಅತ್ಯಾಧುನಿಕವಾದ ಆ್ಯಂಟಿ-ಫ್ರಿಕ್ಷನ್ ಇಂಡಕ್ಷನ್ ಸಿಲಿಂಡರ್ ಬೋರ್‌ಗಳನ್ನು ಕಠಿಣಗೊಳಿಸಿದ್ದು, ಹೆವಿಡ್ಯೂಟಿ ಸ್ಟೀಲ್ ಟೈಮಿಂಗ್ ಚೈನ್, ಗ್ರಾಫೈಟ್ ಕೋಟೆಡ್ ಪಿಸ್ಟನ್‌ಗಳು ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಕಾರು, ವೇಗವಾಗಿ ಮತ್ತು ರಸ್ತೆಯಲ್ಲಿ ಸಂಚರಿಸುವಾಗ ಗುಣಮಟ್ಟ ಹೊಂದಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಎಮರ್ಜೆನ್ಸಿ ಬ್ರೇಕ್ ಅಸೆಸ್ಟ್ ಇಬಿಡಿಯೊಂದಿಗೆ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಹೊಂದಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಇಸುಝು ಮೋಟರ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿರೋಶಿ ನಕಾಗವ, ವ್ಯವಸ್ಥಾಪಕ ನಿರ್ದೇಶಕ ನಾಹೋರೊ ಯಾಮಗುಚಿ, ಕಮ್ಯೂನಿಕೇಷನ್ ವಿಭಾಗದ ಜನರಲ್ ಮ್ಯಾನೇಜರ್ ಜೆ.ಶಂಕರ್ ಶ್ರೀನಿವಾಸ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News