ಜಾಧವ್ ಗಲ್ಲು ಪ್ರಕರಣದ ಬಗ್ಗೆ ಐಸಿಜೆ ಆದೇಶ ಭಾರತದಿಂದ ಪ್ರಮಾದವಾಗಿದೆ ಎಂದು ನ್ಯಾ. ಕಟ್ಜು ಹೇಳಿದ್ದೇಕೆ ?

Update: 2017-05-19 18:35 GMT

ಪಾಕಿಸ್ತಾನದಲ್ಲಿ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರ ಗಲ್ಲಿಗೆ ತಡೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಬಗ್ಗೆ ದೇಶಾದ್ಯಂತ ಭಾರೀ ಖುಷಿಯ ಪ್ರತಿಕ್ರಿಯೆ ಸಹಜವಾಗಿಯೇ ಬರುತ್ತಿವೆ. ಇದು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿದ ಬಹುದೊಡ್ಡ ಜಯ ಹಾಗು ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಟ್ಟಾರೆ ಒಂದು ಜೀವ ಉಳಿದ ಖುಷಿಯ ಜೊತೆ ಭಾರತಕ್ಕೆ ಜಯ, ಪಾಕಿಗೆ ಸೋಲು ಎಂಬ ದೃಷ್ಟಿಯಲ್ಲಿ ಈ ಬೆಳವಣಿಗೆ ದೇಶಾದ್ಯಂತ ಜನರಲ್ಲಿ ಸಂತಸ ಉಂಟು ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಈ ಇಡೀ ಬೆಳವಣಿಗೆಯ ಕುರಿತು ಒಂದು ತದ್ವಿರುದ್ಧ ಅಭಿಪ್ರಾಯ ಕೇಳಿಬಂದಿದೆ. ಅದೂ ಕಾನೂನು ತಜ್ಞ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹಾಗು ನೇರ , ನಿಷ್ಠುರ ಅಭಿಪ್ರಾಯಗಳಿಗೆ ಹೆಸರಾದ ನ್ಯಾ. ಮಾರ್ಕಂಡೇಯ ಕಟ್ಜು ಅವರಿಂದ ! 

ನ್ಯಾ. ಕಟ್ಜು ಪ್ರಕಾರ  ಜಾಧವ್ ವಿಷಯದಲ್ಲಿ  ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದ್ದು ಬಹುದೊಡ್ಡ ಪ್ರಮಾದ ! ಈ ಮೂಲಕ ಭಾರತ ಪಾಕಿಸ್ತಾನ ಹೆಣೆದ ಜಾಲಕ್ಕೆ ಹೋಗಿ ಸಿಲುಕಿಕೊಂಡಿದೆ ಎಂಬುದು ಅವರ ವಾದ . 

ಶುಕ್ರವಾರ ರಾತ್ರಿ ಈ ಕುರಿತು ಫೇಸ್ ಬುಕ್ ಪೋಸ್ಟ್ ಬರೆದಿರುವ ನ್ಯಾ. ಕಟ್ಜು ಅವರು " ಇಂತಹ ಉಭಯ ದೇಶಗಳ ನಡುವಿನ ವಿವಾದದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಬಹುದು ಎಂದು ಈ ಮೂಲಕ ಭಾರತ ಒಪ್ಪಿಕೊಂಡಂತಾಯಿತು. ಬಹುಶ ಇದೇ ಕಾರಣಕ್ಕೆ ಪಾಕ್ ಜಾಧವ್ ವಿಷಯದಲ್ಲಿ ಹೆಚ್ಚು ತಕರಾರಿಲ್ಲದೆ ಸೊಲುಪ್ಪಿಕೊಂಡಿದೆ. ಇನ್ನು ಆ ದೇಶ ಕಾಶ್ಮೀರ ಸಹಿತ ಹಲವು ಸೂಕ್ಷ್ಮ ವಿಷಯಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲಿದೆ. ಆಗ ಅದನ್ನು ಆಕ್ಷೇಪಿಸುವ ಅಧಿಕಾರವನ್ನು ಭಾರತ ಈಗ ಕಳಕೊಂಡಿದೆ. ಒಬ್ಬನ ಪ್ರಾಣ ಉಳಿಸಲು ಹೋಗಿ ಭಾರತ ದೊಡ್ಡ ಎಡವಟ್ಟು ಮಾಡಿದೆ. ಈ ಮೂಲಕ ನಾವು ಪಾಕಿಸ್ತಾನಕ್ಕೆ ದೊಡ್ಡ ಅವಕಾಶ ಮಾಡಿ ಕೊಟ್ಟ ಹಾಗಾಗಿದೆ " ಎಂದು ಹೇಳಿದ್ದಾರೆ. 

ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ :  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News