ನರಸಿಂಹ ಉಗ್ಗಪ್ಪ ಮಾಡಾ

Update: 2017-05-20 11:33 GMT

ಮುಂಬೈ, ಮೇ 20: ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿಯ ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ, ನಗರದ ಪ್ರಸಿದ್ಧ ಉದ್ಯಮಿ ನರಸಿಂಹ ಉಗ್ಗಪ್ಪ ಮಾಡಾ (86) ಅವರು ಶನಿವಾರ ಮಧ್ಯಾಹ್ನ ತನ್ನ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮುಂಬೈ ಯಲ್ಲಿನ ಹೆಸರಾಂತ ಸಮಾಜ ಸೇವಕ ವಿಶ್ವನಾಥ್ ಯು. ಮಾಡಾ ಹಾಗೂ ಡಾ. ಕೆ.ಯು. ಮಾಡಾ ಇವರ ಹಿರಿಯ ಸಹೋದರರಾಗಿದ್ದ ನರಸಿಂಹ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಳೂರು ಕುದ್ರಾಡಿ ಇಲ್ಲಿಯವರಾಗಿದ್ದು, ಸದ್ಯ ಮುಂಬೈ ಯಲ್ಲಿ ಉದ್ಯಮಿಯಾತ್ತಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದ ಮೃತರು ಕೆಲವೊಂದು ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿದ್ದರು.

ಮೃತರ ಪತ್ನಿ ಇತ್ತೀಚೆಗಷ್ಟೇ ಅಗಲಿದ್ದು, ಅವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮಾಡಾ ನಿಧನಕ್ಕೆ ಮಹಾನಗರದ ಅನೇಕ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ