ಬಿ.ಎ. ಅಬ್ದುಲ್ ಹಮೀದ್

Update: 2017-05-20 13:18 GMT

ಮಂಗಳೂರು, ಮೇ 20: ಬಜ್ಪೆ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಉದ್ಯಮಿ ಬಿ.ಎ. ಅಬ್ದುಲ್ ಹಮೀದ್ ಡಿಲೆಕ್ಸ್ (72) ಹೃದಯಾಘಾತದಿಂದ ನಿಧನರಾದರು.


ಕಳೆದ ಹಲವು ವರ್ಷದಿಂದ ಚಿಕ್ಕಮಗಳೂರಿನಲ್ಲಿ ‘ಡಿಲೆಕ್ಸ್’ ಎಂಬ ಹೆಸರಿನ ಹೊಟೇಲ್ ನಡೆಸುತ್ತಿದ್ದ ಅಬ್ದುಲ್ ಹಮೀದ್ ‘ಡಿಲೆಕ್ಸ್’ ಎಂಬ ಹೆಸರಿನಲ್ಲೇ ಗುರುತಿಸಲ್ಪಟ್ಟಿದ್ದರು.

ಬಜ್ಪೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದ ಅಬ್ದುಲ್ ಹಮೀದ್ ನೇರ ನಡೆನುಡಿಯ ವ್ಯಕ್ತಿಯಾಗಿ ಗಮನ ಸೆಳೆದಿದ್ದರು.

ಮಾಜಿ ಸಚಿವ ಬಿ.ಎ.ಮೊಯ್ದಿನ್‌ರ ಸಹೋದರರಾಗಿರುವ ಅಬ್ದುಲ್ ಹಮೀದ್ ಯಾವತ್ತೂ ರಾಜಕೀಯದತ್ತ ಆಸಕ್ತಿ ವಹಿಸದೆ ಸದಾ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬಜ್ಪೆಯ ಮಸೀದಿ ವಠಾರದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ