ಮೂರು ಪತ್ನಿಯರ ಗಂಡ ರೌಡಿ ನಾಗ?
Update: 2017-05-20 21:06 IST
ಬೆಂಗಳೂರು, ಮೇ 20: ಹಳೆ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧನವಾಗಿರುವ ರೌಡಿ ವಿ.ನಾಗರಾಜ್‌ನಿಗೆ ಮೂರು ಪತ್ನಿಯರು ಇದ್ದರು ಎಂದು ತಿಳಿದುಬಂದಿದೆ.
ನಾಗನಿಗೆ ಲಕ್ಷ್ಮೀ ಮತ್ತು ಪುಷ್ಪ ಇಬ್ಬರು ಪತ್ನಿಯರಲ್ಲದೆ ಮತ್ತೊರ್ವ ಪತ್ನಿ ಇದ್ದು, ಮೊದಲನೆಯ ಪತ್ನಿ ವಲ್ಲಿ ಎಂಬಾಕೆ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಕಾರಣಕ್ಕೆ ಊಟದಲ್ಲಿ ವಿಷಬೆರೆಸಿ ನಾಗನೆ ಕೊಲೆ ಮಾಡಿಸಿದ್ದಾನೆ ಎಂದು ಆತನ ಸೋದರಳಿಯ ಬೈಯಪ್ಪ ವಿಚಾರಣೆ ಸಂದರ್ಭ ತಿಳಿಸಿರುವುದಾಗಿ ತಿಳಿದುಬಂದಿದೆ.
ಇಪ್ಪತ್ತು ವರ್ಷಗಳ ಹಿಂದೆ ಮಾಡಿದ ಈ ಕೃತ್ಯದ ಬಗ್ಗೆ ಹೆಣ್ಣೂರು ಪೊಲೀಸರು ವಿಚಾರಣೆ ನಡೆಸಿದ್ದು, ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಗನ ಪತ್ನಿಯರಾದ ಲಕ್ಷ್ಮೀ ಮತ್ತು ಪುಷ್ಪ ಸದ್ಯ ತಲೆಮರೆಸಿಕೊಂಡಿದ್ದು, ತಮ್ಮ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.