×
Ad

ಹತ್ಯೆ ಪ್ರಕರಣ:ಆರೋಪಿಯ ಬಂಧನ

Update: 2017-05-21 18:17 IST

ಬೆಂಗಳೂರು, ಮೇ 21: ಸಲಿಂಗ ಕಾಮಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಾಕೇಶ್ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಎ. 11ರಂದು ರಾತ್ರಿ ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ಸಲಿಂಗಕಾಮಿ ಎನ್ನಲಾದ ಮುರಳೀಧರ್ (35) ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಖಚಿತ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಿದ ಸಿಟಿ ಮಾರುಕಟ್ಟೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಲಿಂಗಕಾಮಕ್ಕೆ ಮುರಳೀಧರ್ ಕೊಲೆಯಾಗಿರುವುದು ತಿಳಿದುಬಂದಿತು.

ಹಾಸನ ಜಿಲ್ಲೆ ಬಸವಾಪಟ್ಟಣದ ಮುರಳೀಧರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ನಗರಕ್ಕೆ ಬಂದು ಮೂಡಲಪಾಳ್ಯದ ಪಂಚಶೀಲ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು.

ಎಸ್‌ಕೆಆರ್ ಮಾರುಕಟ್ಟೆಯ ಕಾಂಪ್ಲೆಕ್ಸ್  ಉತ್ಸವಕ್ಕೆ ಬಂದಿದ್ದ ಮುರಳೀಧರ್ ರಿಗೆ ಆರೋಪಿ ರಾಕೇಶ್ ನ ಪರಿಚಯವಾಗಿ ನಂತರ ಸಲಿಂಗಕಾಮಕ್ಕೆ ಆಹ್ವಾನಿಸಿದ್ದಾಗಿ ರಾಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಮುರಳೀಧರ್ ನೊಂದಿಗಿದ್ದ ಹಣ, ಮೊಬೈಲ್ ಕಿತ್ತು ಪರಾರಿಯಾಗಲು ರಾಕೇಶ್ ಯತ್ನಿಸಿದ್ದು, ಇದನ್ನು ವಿರೋಧಿಸಿದ ಸಂದರ್ಭ ಚಾಕುವಿನಿಂದ ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News