ಕೆ.ಸಿ.ಎಫ್. ಮದೀನಾ ಖಲೀಫಾ ಝೋನ್ ಸಮಿತಿ ಮಹಾಸಭೆ

Update: 2017-05-22 07:25 GMT

ದೋಹಾ, ಮೇ 22: ಅನಿವಾಸಿ ಕನ್ನಡಿಗರ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್.) ಕತಾರ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ಮದೀನಾ ಖಲೀಫಾ ಝೋನ್ ಸಮಿತಿಯ ದ್ವಿತೀಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ದೋಹಾದಲ್ಲಿ ನಡೆಯಿತು.

ಕೆ.ಸಿ.ಎಫ್. ಕತಾರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ದುಆ ನೆರವೇರಿಸಿದರು. ಕೆ.ಸಿ.ಎಫ್. ಅಂತಾರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಯೂಸುಫ್ ಸಖಾಫಿ ಅಯ್ಯಂಗೇರಿ ಅಧ್ಯಕ್ಷತೆ ವಹಿಸಿದ್ದರು. 

ಪ್ರಧಾನ ಕಾರ್ಯದರ್ಶಿ ಮಿರ್ಷಾದ್ ಕನ್ಯಾನ ವರದಿ ಮಂಡಿಸಿದರು. ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಂದುಮಾಯಿ ನಾವುಂದ, ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ, ರಾಷ್ಟ್ರೀಯ ಸಮಿತಿ ಪಬ್ಲಿಕ್ ರಿಲೇಶನ್ ವಿಭಾಗದ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ, ರಾಷ್ಟ್ರೀಯ ಸಮಿತಿ ಕಾರ್ಯಕಾರಿಣಿ ಸದಸ್ಯರಾದ ಸಿದ್ದೀಕ್ ಕೃಷ್ಣಾಪುರ, ಅಝೀಝಿಯ್ಯ ಝೋನ್ ಸಮಿತಿಯ ಅಧ್ಯಕ್ಷ ಖಾಲಿದ್ ಹಿಮಮಿ ಬೋಳಂತೂರು, ದೋಹಾ ಝೋನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಝುಬೈರ್ ತುರ್ಕಳಿಕೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು. ಚುನಾವಣಾ ವೀಕ್ಷಕರಾಗಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ಆಗಮಿಸಿದ್ದರು. ನೂತನ ಸಮಿತಿಯ ಅಧ್ಯಕ್ಷರಾಗಿ ಹಸನ್ ಪುಂಜಾಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಮುರ್ನಾಡು ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಶರೀಫ್ ಫಲ್ನೀರ್ ಆಯ್ಕೆಯಾದರು.

ವಿವಿಧ ವಿಭಾಗಗಳ ಪದಾಧಿಕಾರಿಗಳಾಗಿ ಅಬ್ದುಲ್ ಖಾದರ್ ಕಾಯರ್ತಡ್ಕ (ಅಧ್ಯಕ್ಷರು - ಸಂಘಟನಾ ವಿಭಾಗ), ಆಸಿಫ್ ಬೆಳಪು (ಕಾರ್ಯದರ್ಶಿ - ಸಂಘಟನಾ ವಿಭಾಗ), ಸಾದಿಕ್ ಶಿರ್ವ (ಅಧ್ಯಕ್ಷರು - ಶಿಕ್ಷಣ ವಿಭಾಗ), ಆಸಿಫ್ ಆನೆಕಲ್ (ಕಾರ್ಯದರ್ಶಿ - ಶಿಕ್ಷಣ ವಿಭಾಗ), ನಿಝಾಮುದ್ದೀನ್ ಸಅದಿ ಸೂರಿಕುಮೇರು (ಅಧ್ಯಕ್ಷರು - ಪಬ್ಲಿಷಿಂಗ್ ವಿಭಾಗ), ಗಫೂರ್ ಬಾಯಾರ್ (ಕಾರ್ಯದರ್ಶಿ - ಪಬ್ಲಿಷಿಂಗ್ ವಿಭಾಗ), ಅಬ್ದುಲ್ ಹಮೀದ್ ತೋಕೆ (ಅಧ್ಯಕ್ಷರು - ಸಾಂತ್ವನ ವಿಭಾಗ), ಮುಹಮ್ಮದ್ ಅಶ್ರಫ್ ಕಾವಳ್ ಕಟ್ಟೆ (ಕಾರ್ಯದರ್ಶಿ - ಸಾಂತ್ವನ ವಿಭಾಗ) ಹಾಗೂ 14 ಮಂದಿ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆಮಾಡಲಾಯಿತು.

ನಝೀರ್ ಮುರ್ನಾಡು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News