ನನ್ನ ಹತ್ತಿರ ದುಡ್ಡಿದ್ದಾಗ ತಾಯಿಯನ್ನು ವೈದ್ಯರಿಗೆ ತೋರಿಸುತ್ತಿದ್ದೆ : ಮಹಿನೂರ್

Update: 2017-05-23 05:45 GMT

ನನ್ನ ತಾಯಿ ಕೊನೆಯ ಬಾರಿ ಸರಿಯಾಗಿ ಯಾವಾಗ ನಡೆದಾಡಿದ್ದರೆಂದು ನನಗೆ ನೆನಪಾಗುತ್ತಿಲ್ಲ. ಇಟ್ಟಿಗೆ ಉದ್ದಿಮೆಯಲ್ಲಿ ದುಡಿಯುತ್ತಿದ್ದಾಗ ಅವರು ಇಟ್ಟಿಗೆಯ ರಾಶಿಯಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹಲವು ವರ್ಷಗಳ ಕಾಲ ಅವರು ಹಾಸಿಗೆ ಹಿಡಿದಿದ್ದರು. ಈ ನಡುವೆ ನಾನು ಬೆಳೆದು ದೊಡ್ಡವನಾಗಿ ಕೆಲಸಕ್ಕೆ ಹೋಗಲಾರಂಭಿಸಿದೆ. ನನ್ನ ಬಳಿ ದುಡ್ಡಿದ್ದಾಗಲೆಲ್ಲಾ ಆಕೆಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೆ. ಆಕೆಯನ್ನು ಮನೆಯಲ್ಲಿ ಹೇಗೆ ಆರೈಕೆ ಮಾಡಬೇಕೆಂದು ಹಾಗೂ ಆಕೆ ಅತ್ತಿತ್ತ ಹೋಗುವಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವೈದ್ಯರು ನನಗೆ ವಿವರಿಸಿದ್ದರು. ಮೂರು ತಿಂಗಳುಗಳ ಕಾಲ ಪ್ರತಿ ದಿನ ಕೆಲಸಕ್ಕೆ ಹೋಗುವ ಮುನ್ನ ಆಕೆ ನಡೆದಾಡಲು ನಾನು ಸಹಾಯ ಮಾಡಿದೆ. ಆಕೆ ನನ್ನೊಂದಿಗೆ ವ್ಯಾಯಾಮ ಮಾಡಿದ್ದಳು. ಆಕೆ ಬೀಳದಂತೆ ಹಾಗೂ ಮತ್ತೆ ನಡೆದಾಡಲು ಪ್ರಯತ್ನ ಪಡುವುದನ್ನು ನಿಲ್ಲಿಸದೇ ಇರಲು ನಾನು ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದೆ. ಆಕೆಯ ಸ್ಥಿತಿ ಬಹಳ ನಿಧಾನವಾಗಿ ಸುಧಾರಿಸುತ್ತಿತ್ತು. ತಾನು ಮತ್ತೆ ಮೊದಲಿನಂತಾಗುವುದಿಲ್ಲವೆಂದು ಆಕೆ ಒಮ್ಮೆ ನನ್ನ ಬಳಿ ಹೇಳಿದಳು. ಆದರೆ ನಾನು ಪ್ರಯತ್ನ ಬಿಡಲಿಲ್ಲ. ಇಂದು ಕೆಲಸಕ್ಕೆ ಹೊರಡುವ ಮುನ್ನ ನಾನು ನನ್ನ ಸಹೋದರಿಯ ಬಳಿ ನನಗೆ ನೀರು ತರಲು ಹೇಳಿದೆ. ಆಗ ನನ್ನ ಅಮ್ಮ ಕೆಲ ವಸ್ತುಗಳನ್ನು ಹಿಡಿದು ನನ್ನ ಬಳಿ ಬರುತ್ತಿರುವುದನ್ನು ನೋಡಿದೆ. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ನಾನು ಆಕೆಯ ಬಳಿ ಹಾರಿ ನಿಂತುಕೊಂಡೆ. ನನ್ನ ಅಮ್ಮ ನಮ್ಮ ಜತೆ ಸೇರಿ ತಂಬಾ ನಕ್ಕು ಬಿಟ್ಟರು. ಆಕೆ ಮೊದಲಿನಂತಾಗುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನನಗೀಗಾಗಲೇ ಕೆಲಸಕ್ಕೆ ತಡವಾಗಿದೆ ಹಾಗೂ ನೀರು ಕೂಡ ಕುಡಿಯಲು ಮರೆತಿದ್ದೇನೆ.

- ಮಹಿನೂರ್ 

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News