ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಡಿಪಿ ಯೂಸುಫ್ ಸಖಾಫಿ ಪುನರಾಯ್ಕೆ

Update: 2017-05-24 04:37 GMT

ರಿಯಾದ್, ಮೇ 24: ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಭೆ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ರಿಯಾದ್ ನ ಅಲ್-ಮಾಸ್ ಇಸ್ತಿರಾದಲ್ಲಿ ನಡೆಯಿತು. 

ಹನೀಫ್ ಬೆಳ್ಳಾರೆ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿಗಳಾದ ಉಮರುಲ್ ಫಾರೂಕ್ ಕಾಟಿಪಳ್ಳ ವರದಿ ಮಂಡಿಸಿದರು. ಕೋಶಾಧಿಕಾರಿ ಅಬ್ಬಾಸ್ ಉಳ್ಳಾಲ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿರುವ ರಾಷ್ಟ್ರೀಯ ಸಮಿತಿ ಸದಸ್ಯರ ಸಮ್ಮತಿಗಳೊಂದಿಗೆ ವರದಿ ಹಾಗೂ ಲೆಕ್ಕಪತ್ರಗಳನ್ನು ಅಂಗೀಕರಿಸಲಾಯಿತು.

ಕೆ.ಸಿ.ಎಫ್. ಅಂತಾರಾಷ್ಟ್ರೀಯ  ಕೌನ್ಸಿಲ್ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಚಾಲ್ತಿಯಲ್ಲಿರುವ ಸಮಿತಿಯನ್ನು ಬರ್ಕಾಸ್ತು ಮಾಡಿದ್ದು, ಹೊಸ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು.

ಅಧ್ಯಕ್ಷರಾಗಿ ಡಿ.ಪಿ. ಯೂಸುಫ್ ಸಖಾಫಿ ಬೈತಾರ್, ಉಪಾಧ್ಯಕ್ಷರಾಗಿ ನಝೀರ್ ಹಾಜಿ ಕಾಶಿಪಟ್ನ, ಪ್ರಧಾನ ಕಾರ್ಯದರ್ಶಿಯಾಗಿ ಉಮರ್ ಫಾರೂಕ್ ಕಾಟಿಪಳ್ಳ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಫೈಝಲ್ ಕೃಷ್ಣಾಪುರ, ಕೋಶಾಧಿಕಾರಿಯಾಗಿ ಅಬೂಬಕರ್ ಪಡುಬಿದ್ರೆ ರೈಸ್ಕೋ, ಸಂಘಟನಾ ವಿಭಾಗದ ಚೇರ್ಮೆನ್ ಆಗಿ ಸಿದ್ದೀಕ್ ಸಖಾಫಿ ಪೆರುವಾಯಿ, ಕನ್ವೀನರಾಗಿ ಸಾದಿಕ್ ಕಾಟಿಪಳ್ಳ, ಶಿಕ್ಷಣ ವಿಭಾಗದ ಚೇರ್ಮೆನ್ ಆಗಿ ಅಬ್ದುಲ್ಲಾ ಸಖಾಫಿ, ಕನ್ವೀನರಾಗಿ ಯಹ್ಯಾ ಬಿಳಿಯೂರು, ಸಾಂತ್ವನ ವಿಭಾಗದ ಚೇರ್ಮೆನ್ ಆಗಿ ಸಲೀಂ ಕನ್ಯಾಡಿ, ಕನ್ವೀನರಾಗಿ ಹನೀಫ್ ಮಂಜನಾಡಿ,  
ಪಬ್ಲಿಷಿಂಗ್ ವಿಭಾಗದ ಚೇರ್ಮೆನ್ ಆಗಿ ಅಸ್ರು ಬಜ್ಪೆ, ಕನ್ವೀನರಾಗಿ ಅಶ್ರಫ್ ದೇರಳಕಟ್ಟೆ, ಅಡ್ಮಿನ್ ವಿಭಾಗದ ಚೇರ್ಮೆನ್ ಆಗಿ ಹಬೀಬ್ ಅಡ್ಡೂರ್, ಕನ್ವೀನರಾಗಿ ಅಬ್ದುಲ್ ಸಲಾಂ ಎಣ್ಮೂರು ಆಯ್ಕೆಯಾದರು.

ಸಿದ್ದೀಕ್ ಸಖಾಫಿ ಪೆರುವಾಯಿ ಸ್ವಾಗತಿಸಿದರು. ಸಾದಿಕ್ ಕಾಟಿಪಳ್ಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News