×
Ad

ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಸತೀಶ್ ಕುಮಾರ್ ನೇಮಕ

Update: 2017-05-25 19:38 IST

ಬೆಂಗಳೂರು, ಮೇ 25: ರಾಜ್ಯ ಸರಕಾರ ಹದಿನೈದು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸ್ಥಳಗಳಿಗೆ ತಕ್ಷಣದಿಂದಲೇ ನಿಯೋಜನೆ ಗೊಳ್ಳುವಂತೆ ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

 ಮಂಗಳೂರು ಮಹಾನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್.ಸತೀಶ್ ಕುಮಾರ್ ಅವರನ್ನು ನಿಯೋಜಿಸಿದೆ. ಮಂಗಳೂರು ಮಹಾನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಚಂದ್ರಶೇಖರ್ ಅವರನ್ನು ಬೆಂಗಳೂರಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಎಚ್.ಎಸ್.ರೇವಣ್ಣ-ಡಿಐಜಿ ಪೊಲೀಸ್ ಹೆಡ್‌ಕ್ವಾರ್ಟರ್ಸ್ ಬೆಂಗಳೂರು, ಎಸ್.ಎನ್.ಸಿದ್ಧರಾಮಪ್ಪ-ಎಸ್ಪಿ ಆಂತರಿಕ ಭದ್ರತಾ ವಿಭಾಗ, ಡಾ.ಕೆ.ತ್ಯಾಗರಾಜನ್- ಕೆಎಸ್ಸಾರ್ಪಿ ಕಮಾಂಡರ್, ಡಾ.ಚೇತನ್ ಸಿಂಗ್ ರಾಥೋಡ್-ಎಸ್ಪಿ ತುಮಕೂರು, ಡಾ.ರೋಹಿಣಿ ಕಟೋಚಿ ಸೆಪಟ್-ಎಸ್ಪಿ ಚಾಮರಾಜನಗರ.

ಡಾ.ದಿವ್ಯಾ ವಿ.ಗೋಪಿನಾಥ್-ಎಸ್ಪಿ ರಾಯಚೂರು, ಕುಲದೀಪ್ ಕುಮಾರ್ ಆರ್.ಜೈನ್-ಎಸ್ಪಿ ವಿಜಯಪುರ, ಇಶಾಫಂತ್-ನಿರ್ದೇಶಕಿ ಎಫ್‌ಎಸ್‌ಎಲ್ ಬೆಂಗಳೂರು, ನಿಕ್ಕಂ ಪ್ರಕಾಶ್ ಅಮ್ರಿತಿ-ಪ್ರಾಂಶುಪಾಲರು ಪೊಲೀಸ್ ತರಬೇತಿ ಶಾಲೆ ಕಲಬುರ್ಗಿ, ಜಿ.ರಾಧಿಕಾ-ಎಸ್ಪಿ ಬೀದರ್, ಡಾ.ಅನೂಫ್ ಎ.ಶೆಟ್ಟಿ-ಎಸ್ಪಿ ಕೊಪ್ಪಳ, ಸಂಗೀತಾ ಜಿ.-ಎಸ್ಪಿ ಹುಬ್ಬಳ್ಳಿ-ಧಾರವಾಡ, ರೇಣುಕಾ ಕೆ.ಸುಕುಮಾರ್-ಆಯುಕ್ತೆ ಹುಬ್ಬಳ್ಳಿ-ಧಾರವಾಡ ನಗರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News