ಸಿರಿಯಾ ಮೇಲೆ ಅಮೆರಿಕ ದಾಳಿ: 35 ನಾಗರಿಕರು ಬಲಿ

Update: 2017-05-26 03:40 GMT

ಬೀರತ್, ಮೇ 26: ಅಮೆರಿಕ ನೇತೃತ್ವದ ಮಿತ್ರ ಪಡೆಗಳು, ಬಂಡುಕೋರ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಡಿತದಲ್ಲಿರುವ ಪೂರ್ವ ಸಿರಿಯಾದ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 35 ನಾಗರಿಕರು ಹತ್ಯೆಯಾಗಿದ್ದಾರೆ.

ಮಿತ್ರ ಪಡೆಗಳು ಮಯದೀನ್ ಪಟ್ಟಣದ ಮೇಲೆ ನಡೆಸಿದ ಬಾಂಬ್ ದಾಳಿಯ ವೇಳೆ ನಾಗರಿಕ ಕಟ್ಟಡಗಳು ಧ್ವಂಸವಾಗಿವೆ. ಇದು ಸಿರಿಯಾದ ಪೂರ್ವ ಪ್ರಾಂತ್ಯ ದಿಯರ್ ಎಝೋರ್‌ನ ತೈಲಸಮೃದ್ಧ ಪಟ್ಟಣವಾಗಿದೆ ಎಂದು ಮಾನವ ಹಕ್ಕುಗಳ ವೀಕ್ಷಕರು ವಿವರಿಸಿದ್ದಾರೆ.

"ಮೃತಪಟ್ಟವರಲ್ಲಿ ಕನಿಷ್ಠ 26 ಮಂದಿ ಐಎಸ್ ಬಂಡುಕೋರರ ಸಂಬಂಧಿಗಳು ಸೇರಿದ್ದು, ಬಹುತೇಕ ಮಹಿಳೆಯರು ಮತ್ತು ಮಕ್ಕಳು. ಸಿರಿಯಾ ಹಾಗೂ ಮೊರಾಕ್ಕೊ ನಾಗರಿಕರು ಮೃತಪಟ್ಟವರಲ್ಲಿ ಸೇರಿದ್ದಾರೆ" ಎಂದು ರಾಮಿ ಅಬ್ದುಲ್ ರಹಮಾನ್ ವಿವರಿಸಿದ್ದಾರೆ. ಇತರ ಒಂಬತ್ತು ಮಂದಿ ಸಿರಿಯಾ ನಾಗರಿಕರಾಗಿದ್ದು, ಇವರಲ್ಲಿ ಐದು ಮಕ್ಕಳು ಸೇರಿದ್ದಾಗಿ ಎಎಫ್‌ಪಿಗೆ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಮಿತ್ರಪಡೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 50 ದಾಟಿದಂತಾಗಿದೆ. ಬುಧವಾರದ ದಾಳಿಯಲ್ಲಿ 15 ಮಂದಿ ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News