ಮಟ್ಕಾ ದಂಧೆ: ಇಬ್ಬರ ಬಂಧನ

Update: 2017-05-26 15:07 GMT

ಬೆಂಗಳೂರು, ಮೇ 26: ಮನೆಯೊಂದರಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ 25 ಸಾವಿರ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ನೀಲಸಂದ್ರ ನಿವಾಸಿ ಜಬ್ಬಾರ್ (55), ಅಬ್ದುಲ್ ವಾಜೀದ್ (48) ಬಂಧಿತ ಆರೋಪಿಗಳೆಂದು ಸಿಸಿಬಿ ಗುರುತಿಸಿದೆ.

ಇಲ್ಲಿನ ಬಜಾಜ್ ಸ್ಟ್ರೀಟ್‌ನ ಮನೆಯೊಂದರಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕಲ್ಯಾಣಿ ಮಟ್ಕಾ ಜೂಜಾಟದ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News