ನಿರುದ್ಯೋಗ ನಿವಾರಣೆಗೆ ಒತ್ತಾಯಿಸಿ ಜೆಡಿಯು ಧರಣಿ

Update: 2017-05-27 12:55 GMT

ಬೆಂಗಳೂರು, ಮೇ 27: ಯುವ ಜನರನ್ನು ಬಾಧಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೂಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿ ಜೆಡಿಯು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.

ಈ ವೇಳೆ ಜನತಾದಳ(ಯು) ರಾಜ್ಯ ಸಂಚಾಲಕ ಕೆ.ಶಿವರಾಂ ಮಾತನಾಡಿ, ಹಾಲಿ ಕೇಂದ್ರ ಸರಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರವೇ ಕಳೆದ 3 ವರ್ಷಗಳಲ್ಲಿ ಶೇ.5ರಷ್ಟು ಸೃಷ್ಟಿ ಕಡಿಮೆಯಾಗಿದೆ. ಪ್ರತಿ ವರ್ಷ 1 ಕೋಟಿ 39 ಲಕ್ಷ ಯುವಕ ಯುವತಿಯರು ಉದ್ಯೋಗಕ್ಕೆ ಅರ್ಹರಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಪ್ರಚಾರ ಮಾಡುವಾಗ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 1 ಕೋಟಿ ಉದ್ಯೋಗವನ್ನು ಪ್ರತಿ ವರ್ಷ ಸೃಷ್ಟಿ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಆದರೆ, ಇದು ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಲೇವಡಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ಯೋಗ ನೀತಿಯಲ್ಲಿ ಕೆಲ ಮೂಲಭೂತ ಬದಲಾವಣೆಗಳು ಆಗಬೇಕಾಗಿದೆ. ಆಗಷ್ಟೆ ನಿರುದ್ಯೋಗ ತೊಲಗಿಸಿ ಯುವ ಜನತೆಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ ಎಂದ ಪ್ರತಿಭಟನಾಕಾರರು ಉದ್ಯೋಗ ಸೃಷ್ಟಿಸದ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಧಿಕ್ಕಾರ ಕೂಗಿದರು.

ಈ ಸಂದರ್ಭ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸಿ.ರೆಡ್ಡಿ, ಸಿ.ಕೆ.ರಚಂದ್ರ, ಬೆಂಗಳೂರು ನಗರ ಅಧ್ಯಕ್ಷ ಸುಂದರಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಮಂಜುನಾಥ್, ಕೋಲಾರ ಜಿಲ್ಲಾ ಸಂಚಾಲಕ  ಶ್ರೀ ರಾಮರೆಡ್ಡಿ ಭಾಗವಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News