ಮೈ ಜುಮ್ಮೆನಿಸುವ ಆಗುಂಬೆಯ ಅಪೂರ್ವ ಅನುಭವ

Update: 2017-05-28 05:59 GMT

ಇದು ಕಾಳಿಂಗಸರ್ಪದ ರಾಜಧಾನಿ. ಜತೆಗೆ ಅಪರೂಪದ ಮಲಬಾರ್ ಟ್ರೋಗನ್ ಎಂಬ ಪಕ್ಷಿಪ್ರಭೇದದ ವಾಸತಾಣ. ವಿನಾಶದ ಅಂಚಿನಲ್ಲಿ ರುವ ಸಿಂಹಬಾಲದ ಕೋತಿಯಂತೂ, ಬಸ್ಸಿನ ಚಾಲಕ ಎದುರಿನಿಂದ ಬರುತ್ತಿದ್ದ ಟ್ರಕ್ ಚಲಿಸಲು ಅನುವಾಗುವಂತೆ ರಸ್ತೆಗೋಡೆಯ ಬದಿಗೆ ಬಂದಾಗ ಕಂಡಿತು. ಆಗುಂಬೆ ಗ್ರಾಮದಲ್ಲಿ 600 ಮಂದಿ ವಾಸವಿದ್ದಾರೆ. ಒಂದು ಬಸ್ ನಿಲ್ದಾಣ, ಐದು ದಿನಸಿ ಅಂಗಡಿಗಳು, ಎರಡು ವಸತಿಗೃಹ ಗಳು, ಮೂರು ಹೋಮ್‌ಸ್ಟೇ, ಮೂರು ಹೊಟೇಲ್‌ಗಳು ಹಾಗೂ ಏಕೈಕ ಚಾಟ್ ಅಂಗಡಿ ಇದೆ.

ಆಗುಂಬೆಯಲ್ಲಿ ನೀವು ಬಯಸುವುದು ಮಲ- ಹಿಕ್ಕೆಗಳನ್ನು. ಭಾರತದ ಕಟ್ಟಕಡೆಯ ಮಳೆಕಾಡಿನ ಬಗ್ಗೆ ಅಧ್ಯಯನ ಮಾಡಲು ಇಂಥ ಮಲದ ರಾಶಿಯೇ ಬೇಕು. ಅಲ್ಲಿ ವಾಸವಾಗಿರುವ ಪ್ರಾಣಿವೈವಿಧ್ಯ ಅಧ್ಯಯನಕ್ಕೆ ಇದೊಂದೇ ಮಾರ್ಗ. ವಿಶ್ವದ ಅತೀದೊಡ್ಡ ಗೋಸಂತತಿ, ಕಾಡುಕೋಣಗಳಿಂದ ಹಿಡಿದು ಇರುವೆಗಳ ಮೊವಣಿಗೆವರೆಗೆ, 31 ಬಗೆಯ ಸಸ್ತನಿಗಳು, 574 ಸರೀಸೃಪ ಪ್ರಭೇದಗಳು, 31 ಬಗೆಯ ಉಭಯವಾಸಿಗಳು, 128 ವೈವಿಧ್ಯಮಯ ಚಿಟ್ಟೆಗಳು ಹಾಗೂ 220 ಪಕ್ಷಿಪ್ರಭೇದಗಳ ನಡುವೆ ಭಿನ್ನತೆ ಗುರುತಿಸಲು ಇದೊಂದೇ ಮಾರ್ಗ.

ಮಲರಾಶಿ ಪ್ರಾಣಿಗಳ ಇರುವಿಕೆ ಮತ್ತು ಆಹಾರ ಕ್ರಮ ಮತ್ತು ಸ್ಥಳೀಯ ಪರಿಸರದ ಬಗ್ಗೆ ಮಾಹಿತಿ ನೀಡುತ್ತದೆ. ಅದ್ದರಿಂದ ಆಗುಂಬೆ ಮಳೆಗಾಡಿನಲ್ಲಿ ಹದಿನೈದು ದಿನಗಳ ಕಾಲ ನಾನು ತಂಗಿದ್ದ ಅವಧಿಯಲ್ಲಿ ಕಾಡುಪ್ರಾಣಿಗಳ ಮಲ ಹೆಕ್ಕುವುದು ನನ್ನ ಆದ್ಯತೆಯಾಯಿತು.

ಚಿರತೆ ಹಾಗೂ ಕಾಡುನಾಯಿಯ ಮಲ ಸುಗಂಧಯುಕ್ತ; ಅವುಗಳ ಬೇಟೆಪ್ರಾಣಿಗಳಲ್ಲಿನ ನಾರಿನ ಅಂಶ ಇದಕ್ಕೆ ಕಾರಣ ಎಂದು ಕೇಳಿದ್ದೆ. ಆದರೆ ವಯಸ್ಸಾಗುತ್ತಿದ್ದಂತೆ ಅವುಗಳ ಮಲವಿಸರ್ಜನೆಯಲ್ಲಿ ಬಿಳಿ ಅಂಶ ಹೆಚ್ಚು ತ್ತದೆ. ಎಲುಬಿನ ಕ್ಯಾಲ್ಸಿಯಂ ಮಲದ ಮೂಲಕ ಹೊರಹೋಗುವುದು ಇದಕ್ಕೆ ಕಾರಣ. ಆದ್ದರಿಂದ ಇವುಗಳ ಮಲ ಇಂಗಿನ ಗೋಲಿಯಂತೆ ಹಾಗೂಸಾಂಬಾರ ಜಿಂಕೆಯ ಹಿಕ್ಕೆ ಕ್ಯಾಡ್‌ಬರ್ರಿ ನಟ್ಟೀಸ್‌ನಂತೆ ಕಾಣುತ್ತದೆ. ಬೊಗ ಳುವ ಜಿಂಕೆಗಳು ಹೊರಹಾಕುವ ಗೋಲಿಯಾಕಾರದ ಹಿಕ್ಕೆ, ಕಾಡೆಮ್ಮೆ- ಕಾಡುಕೋಣಗಳ ಸೆಗಣಿ ಲಿಲ್ಲಿ ಪುಟಿನ್ ಅಂಟಿನಂತೆ ಕಂಡುಬರುತ್ತದೆ.

ಸ್ಕೌಟಿಂಗ್ ಮಾಡುವ ಜೀಪುದಾರಿ, ಹುಲ್ಲುಗಾವಲು ಹಾಗೂ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಪೇಪರ್ ಬ್ಯಾಗ್ ಹಾಗೂ ಕೈಯಲ್ಲಿ ಪುಟ್ಟ ಚಿಮಟಿ ಹಿಡಿದು ಹೊರಟರೆ ನಿಧಿಬೇಟೆ ಆರಂಭ ವಾಗುತ್ತದೆ. ಚಿರತೆ ಮತ್ತು ಕಾಡೆಮ್ಮೆಗಳ ಸೆಗಣಿ, ಆ ಪ್ರಾಣಿ ಕಲ್ಲೆಸೆತದ ಅಂತರದಲ್ಲಿದೆಯೇ ಅಥವಾ ಹಲವು ಕಿ.ಮೀ ದೂರದಲ್ಲಿದೆಯೇ ಎಂದು ತಿಳಿಯುವ ವಿಧಾನ ಎಂದು ತಿಳಿಯುವಾಗ ರೋಮಾಂಚನವಾಗುತ್ತದೆ.

ಆದರೆ ಪ್ರಾಣಿಗಳ ಮಲ ಗುರುತಿಸುವುದು ಹಾಗೂ ಕ್ಯಾಮರಾ ಟ್ರ್ಯಾಪ್ ಸಜ್ಜುಗೊಳಿಸುವುದು ನನ್ನ ಆಗುಂಬೆ ಅನುಭವದ ಪ್ರಮುಖ ಅಂಶಗಳು. ನನ್ನ ಈ ಅದ್ಭುತ ವಿಹಾರಕ್ಕೆ ಯಾವ ಬಗೆಯ ಹೋಂವರ್ಕ್ ಕೂಡಾ ನೆರವಿಗೆ ಬರಲಿಲ್ಲ.

ದಟ್ಟಕಾಡಿಗೆ ಸ್ವಾಗತ:

ಉಡುಪಿಯಿಂದ ಆಗುಂಬೆ ಗ್ರಾಮಕ್ಕೆ ಬಸ್ಸುಗಳ ಸಂಚಾರ ಮೈ ನವಿರೇಳಿಸುವ ಹೇರ್‌ಪಿನ್ ತಿರುವುಗಳನ್ನೊಳಗೊಂಡ ಪಶ್ಚಿಮ ಘಟ್ಟದ ರಸ್ತೆಗಳಲ್ಲಿ. ಇದು ಕಾಳಿಂಗಸರ್ಪದ ರಾಜಧಾನಿ. ಜತೆಗೆ ಅಪರೂಪದ ಮಲಬಾರ್ ಟ್ರೋಗನ್ ಎಂಬ ಪಕ್ಷಿಪ್ರಭೇದದ ವಾಸತಾಣ. ವಿನಾಶದ ಅಂಚಿನಲ್ಲಿ ರುವ ಸಿಂಹಬಾಲದ ಕೋತಿಯಂತೂ, ಬಸ್ಸಿನ ಚಾಲಕ ಎದುರಿನಿಂದ ಬರುತ್ತಿದ್ದ ಟ್ರಕ್ ಚಲಿಸಲು ಅನುವಾಗುವಂತೆ ರಸ್ತೆಗೋಡೆಯ ಬದಿಗೆ ಬಂದಾಗ ಕಂಡಿತು. ಆಗುಂಬೆ ಗ್ರಾಮದಲ್ಲಿ 600 ಮಂದಿ ವಾಸವಿದ್ದಾರೆ. ಒಂದು ಬಸ್ ನಿಲ್ದಾಣ, ಐದು ದಿನಸಿ ಅಂಗಡಿಗಳು, ಎರಡು ವಸತಿಗೃಹ ಗಳು, ಮೂರು ಹೋಮ್‌ಸ್ಟೇ, ಮೂರು ಹೊಟೇಲ್‌ಗಳು ಹಾಗೂ ಏಕೈಕ ಚಾಟ್ ಅಂಗಡಿ ಇದೆ.

ಆಗುಂಬೆ ಮಳೆಗಾಡು ಮುಖ್ಯ ಗ್ರಾಮದಿಂದ 1.5 ಕಿ.ಮೀ ದೂರ ದಲ್ಲಿದೆ. ಇಲ್ಲಿ 12 ಹಾಸಿಗೆ ಸೌಲಭ್ಯದ ಧರ್ಮಛತ್ರವಿದೆ. ಸಾಮಾನ್ಯವಾಗಿ ವನ್ಯಸಂರಕ್ಷಕರು, ಜೀವಶಾಸ್ತ್ರಜ್ಞರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಇಲ್ಲಿ ಬೀಡುಬಿಟ್ಟಿರುತ್ತಾರೆ.

ನಾನು ಅಲ್ಲಿ ವಾಸವಿದ್ದ ಅವಧಿಯಲ್ಲಿ, ಪ್ರಣವ್ ಖಂಡೇಲ್‌ವಾಲ್ ಎಂಬ ನಾರ್ತ್ ಕರೋಲಿನಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ, ಅಲ್ಲಿ ಹಾರುವ ಹಲ್ಲಿಯ ಅಧ್ಯಯನಕ್ಕೆ ಆಗಮಿಸಿದ್ದರು. ಆಸ್ಟ್ರೇಲಿ ಯಾದ ಸ್ವೀವ್ ರೋಡ್ಗಿ, ಗೋಲ್ಡ್ ಕೋಸ್ಟ್ ತೊರೆದು ಸ್ವಯಂಪ್ರೇರಿತರಾಗಿ ಪ್ರಣವ್ ಅವರ ಯೋಜನೆಗೆ ಸಹಕರಿಸಲು ಕಳೆದ ಫೆಬ್ರವರಿಯಲ್ಲಿ ಬಂದಿದ್ದರು. ಪ್ರಿಯಾಂಕಾ ಉಪಾಧ್ಯಾಯ, ಹಳದಿ ಕೊಕ್ಕಿನ ಹಕ್ಕಿಯ ಸಂತಾನೋತ್ಪತ್ತಿ ಮತ್ತು ನಡವಳಿಕೆ ಬಗೆಗಿನ ಅಧ್ಯಯನಕ್ಕೆ ಬಂದಿದ್ದರು.

ಸ್ಥಳೀಯ ಸಂಶೋಧನಾ ಆಡಳಿತಗಾರ ಧೀರಜ್ ಬೈಸಾರ್ ಅವರು ಖ್ಯಾತ ಸಂಶೋಧಕ ಹಾಗೂ ವನ್ಯಜೀವಿ ಛಾಯಾಗ್ರಾಹಕ. ಬಾಲ್ಯ ದಿಂದಲೂ ಹಾವುಗಳ ಬಗ್ಗೆ ಅತ್ಯಾಸಕ್ತಿ ಹೊಂದಿದ್ದ ಅವರು 2009ರಲ್ಲಿ ಇಲ್ಲಿಗೆ ಆಗಮಿಸಿದ್ದರು. ಇಲ್ಲಿನ ಕಾಳಿಂಗ ಸರ್ಪಗಳ ಅಧ್ಯಯನ ಯೋಜನೆಗಾಗಿ ಬಂದಿದ್ದರು.

‘‘ಅಂಥ ಧಾರಾಕಾರ ಮಳೆಯ ಸೊಬಗನ್ನು ನಾನೆಂದೂ ಸವಿದಿರಲಿಲ್ಲ. ಆದರೆ 12 ಗಂಟೆಗಳ ಕ್ಷೇತ್ರಕಾರ್ಯ ಮಾಡುವಷ್ಟರ ಮಟ್ಟಿಗೆ ಕಾಳಿಂಗ ಸರ್ಪದ ಬಗ್ಗೆ ನನಗೆ ಆಸಕ್ತಿ ಇತ್ತು. ಅಸಂಖ್ಯಾತ ಉಂಬಳ ಮತ್ತು ಶಿಲೀಂದ್ರ ನನ್ನ ಬಟ್ಟೆಯಲ್ಲಿ ಬೆಳೆಯುತ್ತಿತ್ತು. ಆ ಬಳಿಕ ಈ ಜಾಗ ನನ್ನ ಮನೆಯಾಗಿದೆ. ಇದೀಗ ಕಾಡಿನ ಹೊರಗಿನ ಜೀವನ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’’ ಎಂದು ನೆನಪಿಸಿಕೊಂಡರು.

ಎರಡು ವರ್ಷಗಳ ಹಿಂದೆ ಮಾಜಿ ಗ್ರಾಫಿಕ್ ಡಿಸೈನರ್ ಸಿ.ಎಂ.ಶಂಕರ್ ಸಂದರ್ಶಕರಾಗಿ ಇಲ್ಲಿಗೆ ಆಗಮಿಸಿ, ಬೇಸ್ ವ್ಯವಸ್ಥಾಪಕರಾಗಿ ಉಳಿದರು. ಇವರು ಮೂಲತಃ ಮೆಕ್‌ಗೈವರ್ ನಿವಾಸಿ. ಒಂದೆಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಒಯ್ಯಬಹುದಾದ ಫ್ಯಾನ್, ಸೌರ ಪ್ಯಾನಲ್ ಹೀಗೆ ಡಿಐವೈ ಯೋಜನೆಯಲ್ಲಿ ಮುಳುಗುವವರೆಗೂ, ಅವರು ಸಿಬ್ಬಂದಿ ಮತ್ತು ಸಂದರ್ಶಕರ ಮೇಲ್ವಿಚಾರಣೆ, ಅಕೌಂಟ್ಸ್ ನಿರ್ವಹಣೆಯಂಥ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಒಳಗೆ ಬರುವ ಆಸೆಯೇ?:

ಯಾವುದೇ ಸ್ವಯಂಸೇವಕರಿಗೆ ಕನಿಷ್ಠ 15 ದಿನಗಳ ಬದ್ಧತೆ ಬೇಕು. ಯಂಗ್ ಇಕಾಲಜಿಸ್ಟ್ಸ್ ಟಾಕ್ ಅಂಡ್ ಇಂಟರ್ಯಾಕ್ಟ್ ಯೋಜನೆ (ವೈಇಟಿಐ) ವಾರ್ತಾಪತ್ರದ ಮೂಲಕ ಸ್ವಯಂಸೇವಕರು ಹಾಗೂ ಸಂಶೋಧನಾ ಸಹಾಯಕರಿಗೆ ಕರೆ ಬರುತ್ತದೆ. ವನ್ಯಜೀವಿಗಳ ಬಗ್ಗೆ ಆಸಕ್ತಿ ಅಥವಾ ಪ್ರಾಣಿಗಳ ಬಗ್ಗೆ ಪ್ರೀತಿ ಇರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.

ಎಆರ್‌ಆರ್‌ಎಸ್ ಶುಲ್ಕ ದಿನಕ್ಕೆ 400 ರೂಪಾಯಿ. ಇದರಲ್ಲಿ ಧರ್ಮಶಾಲೆಯ ವಾಸದ ವೆಚ್ಚ ಹಾಗೂ ಎಲ್ಲ ಊಟದ ವೆಚ್ಚ ಸೇರುತ್ತದೆ. ಇಲ್ಲಿ ಸಂಶೋಧಕರು ಮೊಣಕಾಲು ಇಲ್ಲದ ಉಭಯವಾಸಿಗಳ ಸಂಶೋಧನೆ, ಹಲ್ಲಿಗಳಲ್ಲಿ ಕಂಡುಬರುವ ಉಭಯಲಿಂಗಿ ಪ್ರಭೇದ ಮತ್ತಿತರ ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧ ಗಳನ್ನು ಮಂಡಿಸಿದ್ದಾರೆ. ಕಾಳಿಂಗಸರ್ಪ ಟೆಲಿಮೆಟ್ರಿ ಯೋಜನೆಯನ್ನು ಇಲ್ಲಿ ನಿರ್ವಹಿಸಲಾಗಿದ್ದು, ತನ್ನ ವಾಸ ತಾಣದಿಂದ 15 ಕಿ.ಮೀ ಹೊರಪ್ರದೇಶಕ್ಕೆ ಬಂದರೂ ಕಾಳಿಂಗ ಸರ್ಪ ಉಳಿಯಲಾರದು ಎನ್ನುವುದು ಇದರಿಂದ ದೃಢಪಟ್ಟಿದೆ.

ಬಿಎಸ್ಸೆನ್ನೆಲ್ ಹೊರತುಪಡಿಸಿದರೆ ಯಾವ ಮೊಬೈಲ್ ಸಂಪರ್ಕವೂ ಸಿಗುವುದಿಲ್ಲ. ಬಿಡಾರದಲ್ಲಿ ಇರುವಷ್ಟೂ ಸಮಯ ಓದು ಅಥವಾ ಹರಟೆ ಮೂಲಕವೇ ಕಳೆಯಬೇಕು. ಹೆಚ್ಚಿನ ವಿರಾಮದ ಸಮಯವನ್ನು ಸುದೀರ್ಘ ವಾಯುವಿಹಾರ, ರಾತ್ರಿ ಸಪಾರಿ, ಬ್ಲಪ್ ಹಾಗೂ ರಮ್ಮಿಯಂಥ ಆಟದ ಮೂಲಕವೇ ಸಾಗಿಸಬೇಕು.

ಕೆಲಸದ ಅವಧಿಯಲ್ಲಿ, ಕ್ಯಾಮರಾ ಟ್ರ್ಯಾಪ್‌ಗಳನ್ನು ಹೇಗೆ ವ್ಯವಸ್ಥೆ ಮಾಡಬೇಕು ಎಂಬ ತರಬೇತಿ, ವೀಕ್ಷಣೆ ಹಾಗೂ ವಿಭಿನ್ನ ಕಾಲುದಾರಿಗಳನ್ನು ಗುರುತಿಸುವಿಕೆ ಬಗ್ಗೆ ಮಾರ್ಗದರ್ಶನ ಇರುತ್ತದೆ. ಕಾಡಿನ ಯಾತ್ರೆಯಲ್ಲಿ, ಶಂಕರ್ ಅವರು ವಿಷಪೂರಿತ ಹಾವುಗಳ ಬಿಲಗಳಿಂದ ಹಿಡಿದು, ಕಾಡುಹಂದಿಗಳ ಗಲ್ಲಿಯವರೆಗೆ, ಪ್ರಾಣಿಗಳ ಒಣಗಿದ ಮಲ ರಾಶಿ, ಗೋಡೆಕಟ್ಟಿದ ರೀತಿಯ ತಗ್ಗುಗಳವರೆಗೆ ಎಲ್ಲವನ್ನೂ ಪರಿಚಯಿಸುತ್ತಾರೆ.

ಮುಸ್ಸಂಜೆಯಲ್ಲಿ, ಕಾಡಾನೆ ರೊಚ್ಚಿಗೆದ್ದ ಪ್ರಸಂಗ, ನಾಚಿಕೆ ಸ್ವಭಾವದ ಚಿರತೆ, ನಾಗರಹಾವಿನ ರಕ್ಷಣೆ, ಮುಕ್ತವಾದ ಹುಲ್ಲುಗಾವಲಿನಲ್ಲಿ ಮಲಗಿ ನಕ್ಷತ್ರ ಎಣಿಸುವಂಥ ರೋಚಕ ಕಥೆಗಳ ವಿನಿಮಯವಾಗುತ್ತದೆ. ಎಆರ್‌ಆರ್‌ಎಸ್ ನಿಮಗಾಗಿ ಹೇಳಿ ಮಾಡಿಸಿದಂತಿದೆ. ಮುಕ್ತವಾದ ಹುಲ್ಲುಗಾವಲಿನಲ್ಲಿ ನಕ್ಷತ್ರ ಅವಲೋಕಿಸಬಹುದು. ಹಸಿರುನೆಲ ನಿಮಗಾಗಿ ಪರ್ಯಟನೆಗೆ ಮುಕ್ತವಾಗಿದೆ. ಹಿಂಬದಿಯಂತೂ ನಿಮಗೆ ಕ್ರಿಕೆಟ್ ಮೈದಾನವಾಗಿ, ಕಾಫಿ ಹೀರುವ ಮತ್ತು ಹರಟುವ ಆಹ್ಲಾದಕರ ತಾಣವಾಗಿದೆ. ನಗರದ ಶ್ವಾಸಕೋಶಗಳಿಗೆ ದಿಗ್ಭ್ರಮೆ ಹುಟ್ಟಿಸುವಂಥ ಸುವಾಸಿತ ತಂಗಾಳಿ, ಅಪರೂಪದ ಪ್ರಭೇದಗಳ ಚೆಲುವನ್ನು ತುಂಬಿಕೊಂಡ ಕಾಡು, ಹಕ್ಕಿಗಳ ಕಲರವ, ಚಿಲಿಪಿಲಿ, ಮೃಗಗಳ ಕೂಗಿನ ರಸಮಂಜರಿ ನಿಮಗಾಗಿ ಕಾದಿರುತ್ತದೆ.

ಎಆರ್‌ಆರ್‌ಎಸ್ ಕಚೇರಿ ವೈ-ಫೈ ಸೌಲಭ್ಯ ಹೊಂದಿದ್ದು, ಆರಂಭದಲ್ಲಿ ನಾನು ಸ್ನೇಹಿತರು ಹಾಗೂ ಕುಟುಂಬದ ಜತೆ ವಾಟ್ಸ್‌ಆ್ಯಪ್ ಸಂದೇಶ ವಿನಿಮಯಕ್ಕೆ ಅದನ್ನು ಬಳಸಿಕೊಳ್ಳುತ್ತಿದ್ದೆ. ದಿನ ಕಳೆದಂತೆ, ದೂರವಾಣಿ ಋಣಭಾರವಾಗಿ ಪರಿಣಮಿಸಿತು. ಮಲಬಾರ್ ಹಕ್ಕಿನ ಕೂಗಿನಿಂದ ಎಚ್ಚರವಾಗುವಾಗ ಅಲರಾಂ ಕೂಡಾ ಅಪ್ರಸ್ತುತ ಎನಿಸುತ್ತದೆ. ಮಲಬಾರ್ ದೈತ್ಯ ಅಳಿಲು, ಆಕರ್ಷಕ ಮಲಬಾರ್ ಟ್ರೋಜೋನ್, ಮಲಬಾರ್ ಬೂದುಬಣ್ಣದ ಹಾರ್ನ್‌ಬಿಲ್, ಮುಸುವ, ಮಲಬಾರ್‌ನ ಹಾರುವ ಕಪ್ಪೆಯಂಥ ಸ್ನೇಹಿತರು ಇರುವಾಗ ಸಾಮಾಜಿಕ ಜಾಲತಾಣದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು?

‘‘ಆಗುಂಬೆ ನಿಮ್ಮನ್ನು ಫೋನ್‌ನಿಂದ ದೂರ ಇರುವಂತೆ ಒತ್ತಡ ತರುತ್ತದೆ. ನೀವು ಕೇಳರಿಯದ ಹಸಿರು ಹಾಗೂ ವನ್ಯಪ್ರಾಣಿಗಳ ಅಸ್ತಿತ್ವದ ಅನಂತ ಶ್ರೇಣಿಯನ್ನು ನೀವು ಆಸ್ವಾದಿಸುತ್ತಲೇ ಇರುವಂಥ ತಾಣ’’ ಎಂದು ಪ್ರಣವ್ ಬಣ್ಣಿಸುತ್ತಾರೆ.‘‘ ಚಿಟ್ಟೆಗಳ ಮಾಟವನ್ನು ದಿಟ್ಟಿಸುತ್ತಾ ತಿಂಗಳುಗಳನ್ನು ಕಳೆಯಬಹುದು. ಅವುಗಳನ್ನು ಹಿಡಿದು, ಕ್ಯಾಮರಾದಲ್ಲೂ ಸೆರೆ ಹಿಡಿಯುವ ಅನುಭವ ಯಾವುದಕ್ಕೂ ಕಡಿಮೆಯಲ್ಲ. ಕಾಡುಪ್ರಾಣಿಗಳ ಬಗೆಗಿನ ಜ್ಞಾನ, ಅಪರಿಮಿತ ತಾಳ್ಮೆ ನನ್ನ ಅನುಭವಗಳು’’.

ಕಾಡಿನಲ್ಲಿ ತಾಳ್ಮೆಗೆ ಪ್ರತಿಫಲ ಇದ್ದೇ ಇದೆ. ದೊಡ್ಡ ಕಲ್ಲುಬಂಡೆಗಳಲ್ಲಿ ಕುಳಿತು, ಒಣಗಿದ ಎಲೆಗೊಂಚಲು, ಬತ್ತಿದ ತೊರೆಗಳನ್ನು ನೋಡುತ್ತಾ ಗಂಟೆಗಟ್ಟಲೆ, ಸಣ್ಣ ಚಲನೆಯನ್ನೂ ವೀಕ್ಷಿಸುತ್ತಾ ಕಾಯುವ ಕ್ಷಣ, ನಗರದ ಗೌಜುಗದ್ದಲಗಳಿಂದ ಮುಕ್ತಿ ನೀಡುತ್ತದೆ.

ಅವು- ಇವುಗಳ ಮಧ್ಯೆ ನಾನು ಕಾಂಕ್ರೀಟ್ ಕಾಡಿನಲ್ಲಿ ಬರೆಯುತ್ತಿದ್ದು, ಸೆಗಣಿ ಹೆಕ್ಕುವ ಆನಂದಕ್ಕಾಗಿ ಹಂಬಲಿಸುತ್ತಿದ್ದೇನೆ. ಇನ್ನೂ ಸಾಕಷ್ಟಿದೆ..

ಕೃಪೆ: ಹಿಂದೂಸ್ತಾನ್ ಟೈಮ್ಸ್

Writer - ರೋಶ್ನಿ ನಾಯರ್

contributor

Editor - ರೋಶ್ನಿ ನಾಯರ್

contributor

Similar News