ಹಾಜಿ ಅಹ್ಮದ್ ಗುಲಾಮ್

Update: 2017-05-30 08:38 GMT

ಮಂಗಳೂರು, ಮೇ 30: ನಗರದ ಬೋಳಾರ ನಿವಾಸಿ ಹಾಜಿ ಅಹ್ಮದ್ ಗುಲಾಮ್ (92) ಮಂಗಳವಾರ ಪೂರ್ವಾಹ್ನ 11:30 ಕ್ಕೆ ನಿಧನರಾದರು.
ಮೃತರು ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಸಹಿತ 5 ಮಂದಿ ಪುತ್ರರು, 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಪತ್ನಿ ಮತ್ತು ಓರ್ವ ಪುತ್ರ ಈ ಹಿಂದೆಯೇ ನಿಧನರಾಗಿದ್ದಾರೆ.

ಹಲವು ವರ್ಷಗಳ ಕಾಲ ಬಂದರ್‌ನಲ್ಲಿ ಹುರಿ ಹಗ್ಗ ವ್ಯಾಪಾರಿಯಾಗಿದ್ದ ಹಾಜಿ ಅಹ್ಮದ್ ಗುಲಾಮ್ ಅಲ್‌ ಅಝಹರಿಯಾ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಅನೇಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ