×
Ad

ನೀಟ್ ಫಲಿತಾಂಶದ ಬಳಿಕ ವೈದ್ಯ, ದಂತವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ರ‍್ಯಾಂಕ್ ಪ್ರಕಟ: ಬಸವರಾಜ ರಾಯರೆಡ್ಡಿ

Update: 2017-05-30 19:25 IST

ಬೆಂಗಳೂರು, ಮೇ 30: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಒಟ್ಟು 404 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಆ ಪೈಕಿ 1,88,411 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 1,80,508 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

      ಮಂಗಳವಾರ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಿ ಮಾತನಾಡಿದ ಅವರು, ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸಿಗೆ 96,642 ಅಭ್ಯರ್ಥಿಗಳು, ಎಂಜಿನಿಯರಿಂಗ್ ಕೋರ್ಸಿಗೆ 1,25,860 ರ್ಯಾಂಕ್ ನೀಡಲಾಗಿದೆ ಎಂದು ಹೇಳಿದರು.

      ಕೃಷಿ ಕೋರ್ಸಿಗೆ 95,767 ಅಭ್ಯರ್ಥಿಗಳು, 94,478 ಪಶುಸಂಗೋಪನೆ, 1,26,839 ಅಭ್ಯರ್ಥಿಗಳು ಬಿ.ಫಾರ್ಮ್ ಕೋರ್ಸಿಗೆ ಮತ್ತು ಫಾರ್ಮ್‌ಡಿ ಕೋರ್ಸಿಗೆ ಅರ್ಹತೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.

              ಪ್ರಸ್ತುತ ಸಾಲಿನ ನೀಟ್ ಫಲಿತಾಂಶ ಬಂದ ಬಳಿಕ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರ್ಯಾಂಕ್‌ನ್ನು ಪ್ರಕಟಿಸಲಾಗುವುದು. ಹಾಗೆಯೇ ನಾಟಾ(ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರ್ಯಾಂಕನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು.

      ಆನ್‌ಲೈನ್‌ಮೂಲಕ ನೀಟ್ ಮತ್ತು ನಾಟಾ ಅಂಕಗಳನ್ನು ದಾಖಲಿಸಲು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಾಧಿಕಾರವು ಕ್ರಮ ಕೈಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹಾಗೂ ರ್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗ ಣಿಸಲಾಗುವುದು ಎಂದು ತಿಳಿಸಿದರು.

      ಯಾವುದಾದರೂ ಅರ್ಹ ಅಭ್ಯರ್ಥಿಗೆ ರ್ಯಾಂಕ್ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರ್ಯಾಂಕ್ ಅನ್ನು ಪಡೆಯಬಹುದೆಂದು ಹೇಳಿದ್ದಾರೆ.

       keauthority-ka@nic.in     ಅಂಕಗಳಲ್ಲಿ ವ್ಯತ್ಯಾಸ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆ ಪ್ರಕ್ರಿಯೆಗೆ ಬರುವ ಮುನ್ನ ಸಿಇಟಿ ಫಲಿತಾಂಶ ಪಟ್ಟಿಯಲ್ಲಿ ಅವರ ಸಿಇಟಿ ನಂಬರಿನ ಮುಂದೆ ಪ್ರಚುರಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪರಿಶೀಲಿಸಿಕೊಂಡು ಏನಾದರೂ ವ್ಯತ್ಯಾಸಗಳಿದ್ದಲ್ಲಿ ಇಮೇಲ್ ಮೂಲಕ ಪ್ರಾಧಿಕಾರ ಗಮನಕ್ಕೆ ತರಲು ಕೋರಿದೆ.

     keauthority-ka@nic.in  ರ್ಯಾಂಕ್ ತಡೆಹಿಡಿದಿದ್ದಲ್ಲಿ ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇಮೇಲ್ ಮೂಲಕ/ ಫ್ಯಾಕ್ಸ್/ಖುದ್ದಾಗಿ ಸಲ್ಲಿಸಿ ತಮ್ಮ ರ್ಯಾಂಕ್‌ಗಳನ್ನು ಪಡೆಯಬಹುದಾಗಿದೆ.

              ಮರು ವೌಲ್ಯಮಾಪನ ದ್ವಿತೀಯ ಪಿಯುಸಿ ಮರುವೌಲ್ಯಮಾಪನದ ಅಂಕಗಳಲ್ಲಿ ವ್ಯತ್ಯಾಸವಾದಲ್ಲಿ ಆ ಅಂಕಗಳ ಆಧಾರದ ಮೇರೆಗೆ ಹೊಸ ರ್ಯಾಂಕ್ ಅನ್ನು ನೀಡಲಾಗುವುದು. ಪದವಿ ಪೂರ್ವ ಶಿಕ್ಷಣ ಇಲಾಖೆಯು ನೇರವಾಗಿ ಮರು ವೌಲ್ಯಮಾಪನದ ವಿವರಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.

       ಐದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ‘ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರಕಾರದಿಂದ ಉಚಿತ ಶಿಕ್ಷಣ ನೀಡಲಾಗುವುದು. ಹಾಗೂ ಈ ವರ್ಷದಿಂದ ಕೊಪ್ಪಳದಲ್ಲಿ ಹೊಸದಾಗಿ ಸಹಾಯ ಕೇಂದ್ರವನ್ನು ತೆರೆಯಲಾಗುವುದು.’

-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News