ಮಾದಕ ವಸ್ತು ಮಾರಾಟ: ಮೂವರ ಬಂಧನ
Update: 2017-06-01 23:47 IST
ಬೆಂಗಳೂರು, ಜೂ.1: ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾದ ಲಾಗೋಸ್‌ನ ಅಗಸ್ಟಿನ್ (35), ಆಂಟೋನಿ ಥೈತೆ (35) ಹಾಗೂ ಅಮೇಚಿ ಓಕಾಫರ್ (29) ಬಂಧಿತ ಆರೋಪಿ ಗಳೆಂದು ಪೊಲೀಸರು ತಿಳಿಸಿದ್ದಾರೆ.
ಕೆಆರ್ ಪುರಂ ಸಮೀಪದ ಪ್ರಿಯಾಂಕ ನಗರದಲ್ಲಿ ಆರೋಪಿಗಳು ಬಾಡಿಗೆ ಮನೆ ಮಾಡಿಕೊಂಡು ಕೊಕೇನ್‌ನನ್ನು ತಂದು ನಗರದೆಲ್ಲೆಡೆ ಸಂಚರಿಸಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 15 ಗ್ರಾಂ ಕೊಕೇನ್, 12 ಮೊಬೈಲ್ ಗಳು, 1 ಲ್ಯಾಪ್‌ಟಾಪ್, 2 ಬೈಕ್‌ಗಳನ್ನು ವಶಪಡಿಸಿಕೊಂಡು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸರ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.
ಆರೋಪಿಗಳು ವಿದ್ಯಾರ್ಥಿ ಹಾಗೂ ವ್ಯಾಪಾರಿ ವೀಸಾದಡಿ ನಗರಕ್ಕೆ ಬಂದು ಕೊಕೇನ್ ಮಾರಾಟ ದಂಧೆಯಲ್ಲಿ ತೊಡಗಿದ್ದರು.