ಶಂಕರ ಖಾರ್ವಿ

Update: 2017-06-02 15:58 GMT

ಕುಂದಾಪುರ, ಜೂ.2: ಕುಂದಾಪುರ ಕೊಂಕಣ ಖಾರ್ವಿ ಸಮಾಜದ ಹಿರಿಯ ಮುಂದಾಳು, ಖ್ಯಾತ ಉದ್ಯಮಿ ಶಂಕರ ಖಾರ್ವಿ ಅವರು ಖಾರ್ವಿಕೇರಿಯ ಮೇಲ್ಕೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಇಂದು ಅಪರಾಹ್ನ ನಿಧನರಾದರು.

ಅವರಿಗೆ 73 ವರ್ಷ ಪ್ರಾಯವಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಖಾರ್ವಿಕೇರಿಯಲ್ಲಿ ಜನಿಸಿದ ಶಂಕರ ಖಾರ್ವಿ ಅರಂಭದಲ್ಲಿ ವಿವಿಧ ಮರದ ಮಿಲ್ಲುಗಳಲ್ಲಿ ಮೇಸ್ತ್ರಿಯಾಗಿ ಉದ್ಯೋಗ ನಿರ್ವಹಿಸಿ, ಅನಂತರ ಚಿಪ್ಪು ಉದ್ಯಮ ದಲ್ಲಿ ತನ್ನನ್ನು ತೊಡಗಿಸಕೊಂಡರು. ಕೋಣಿಯಲ್ಲಿ ಚಿಪ್ಪು ಸಂಸ್ಕರಣದ ಬೃಹತ್ ಕಾರ್ಖಾನೆ ಸ್ಥಾಪಿಸುವ ಮೂಲಕ ಕುಂದಾಪುರ ಪರಿಸರದ ಅಸಂಖ್ಯಾತರಿಗೆ ಉದ್ಯೋಗವನ್ನು ನೀಡಿದರಲ್ಲದೆ ಖಾರ್ವಿಕೇರಿಯಲ್ಲಿ ಚಿಪ್ಪು ವ್ಯವಹಾರವನ್ನು ಬೃಹತ್ ಉದ್ಯಮವಾಗಿ ಬೆಳೆಸಿದರು.

 ಕುಂದಾಪುರದಲ್ಲಿ ಶ್ರೀಆಂಜನೇಯ ವ್ಯಾಯಾಮ ಶಾಲೆಯನ್ನು ಆರಂಭಿಸು ವಲ್ಲಿ ಪ್ರಮುಖ ಪಾತ್ರ ವಹಿಸಿ ಆ ಮೂಲಕ ಶಿಷ್ಠ ಶೈಲಿಯ ಬೆಂಕಿಯಾಟದ ಕಲೆಯನ್ನು ದೇಶದೆಲ್ಲಡೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ