×
Ad

ಇಬ್ಬರು ರೌಡಿಗಳ ಬಂಧನ

Update: 2017-06-03 22:01 IST


 ಬೆಂಗಳೂರು, ಜೂ. 3: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
 
ಜಯನಗರದ ವಿನೋದ್ ಅಲಿಯಾಸ್ ಆಪಲ್ (25) ಹಾಗೂ ಮಡಿವಾಳದ ಸೈಮನ್ ರಾಜ್(24) ಬಂಧಿತ ಆರೋಪಿಗಳು. ಜಯನಗರದ ರೌಡಿಪಟ್ಟಿಯಲ್ಲಿರುವ ವಿನೋದ್ 2 ದರೋಡೆ, 4 ದರೋಡೆಗೆ ಯತ್ನ ಸೇರಿದಂತೆ 6 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮತ್ತೊಬ್ಬ ರೌಡಿ ಸೈಮನ್ ಮಡಿವಾಳ ಠಾಣೆ ಯ ರೌಡಿಶೀಟರ್ ಆಗಿದ್ದು, ಕೊಲೆ, ಕೊಲೆಯತ್ನ, ಶಸ್ತ್ರಾಸ್ತ್ರ ಕಾಯ್ದೆ ಸೇರಿ 6 ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News