×
Ad

215 ಕೋಟಿ ರೂ. ವೌಲ್ಯದ ಜಮೀನು ವಶ

Update: 2017-06-03 22:11 IST

ಬೆಂಗಳೂರು, ಜೂ. 3: ನಗರದಲ್ಲಿ ಮೂರು ಕಡೆಗಳಲ್ಲಿ ಏಕಕಾಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಜಿಲ್ಲಾಡಳಿತವು 215 ಕೋಟಿ ರೂ.ಗೂ ಹೆಚ್ಚು ಮೌಲ್ಯದ 45.22 ಎಕರೆ ಸರಕಾರಿ ಜಮೀನನ್ನು ವಶಪಡಿಸಿಕೊಂಡಿದೆ.


 ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರ ನಿರ್ದೇಶನದಂತೆ ಅಪರ ಜಿಲ್ಲಾಧಿಕಾರಿ ಕಾಂತರಾಜು, ಉಪವಿಭಾಗಾಧಿಕಾರಿ ಡಿ.ಬಿ ನಟೇಶ್, ತಹಶೀಲ್ದಾರ್ ಶಿವಕುಮಾರ್, ಜಾರಿ ದಳ ಉಪವಿಭಾಗಾಧಿಕಾರಿ ನಾಗರಾಜ ರೆಡ್ಡಿ ನೇತೃತ್ವದಲ್ಲಿ ಸರಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
 ಬೆಂಗಳೂರು ದಕ್ಷಿಣ ತಾಲ್ಲೂಕಿನ ಗೊಲ್ಲಹಳ್ಳಿಯ ಸರ್ವೆ ನಂ. 31, 55ರಲ್ಲಿ ಸುಮಾರು 40 ಎಕರೆಗಳಷ್ಟು ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ಶೆಡ್, ಮನೆಗಳು, ಪೆಟ್ಟಿಗೆ ಅಂಗಡಿಗಳನ್ನು ಪೊಲೀಸರ ರಕ್ಷಣೆಯಲ್ಲಿ ನೆಲಸಮಗೊಳಿಸಿದರು.

ಕಳೆದವಾರ ತೆರವುಗೊಳಿಸುವಂತೆ ನೀಡಿದ್ದ ಆದೇಶದಂತೆ ಕೆಲ ಮನೆಗಳು, ಶೆಡ್‌ಗಳು ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದರು. ಬೆಂಗಳೂರು ಪೂರ್ವ ತಾಲ್ಲೂಕು, ಸಿದ್ದಾಪುರ ಗ್ರಾಮದಲ್ಲಿ ವೈಟ್‌ಫೀಲ್ಡ್ ವರ್ತೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇದ್ದ 22 ಗುಂಟೆ ಸರಕಾರಿ ಜಾಗವನ್ನು ವಶಪಡಿಸಿಕೊಳ್ಳಲಾಯಿತು.

ಕಳೆದವಾರ ತೆರವುಗೊಳಿಸುವಂತೆ ನೀಡಿದ್ದ ಆದೇಶದಂತೆ ಕೆಲ ಮನೆಗಳು, ಶೆಡ್‌ಗಳು ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದರು. ಬೆಂಗಳೂರು ಪೂರ್ವ ತಾಲ್ಲೂಕು, ಸಿದ್ದಾಪುರ ಗ್ರಾಮದಲ್ಲಿ ವೈಟ್‌ಫೀಲ್ಡ್ ವರ್ತೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇದ್ದ 22 ಗುಂಟೆ ಸರಕಾರಿ ಜಾಗವನ್ನು ವಶಪಡಿಸಿಕೊಳ್ಳಲಾಯಿತು. ಬೆಂಗಳೂರು ಉತ್ತರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸರ್ವೆ ನಂ. 21 ರಲ್ಲಿ ಒತ್ತುವರಿಯಾಗಿದ್ದ 15 ಕೋಟಿ ರೂ. ಮೌಲ್ಯದ 5 ಎಕರೆ ಪ್ರದೇಶವನ್ನು ಜಿಲ್ಲಾಡಳಿತದ ಅಧಿಕಾರಿಗಳು ಮರುವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News