×
Ad

ರೈಲಿನ ಬೋಗಿಗೆ ಬೆಂಕಿ: ಓರ್ವನ ಸ್ಥಿತಿ ಗಂಭೀರ

Update: 2017-06-04 21:21 IST
ಬೆಂಗಳೂರು, ಜೂ.4: ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ಮೆಟ್ರೋ ಬೋಗಿಗೆ ಹೈಟೆನ್ಶನ್ ವಿದ್ಯುತ್ ತಗುಲಿ ಬೆಂಕಿ ಹೊತ್ತಿಕೊಂಡು ಇಡೀ ಬೋಗಿ ಬೆಂಕಿ ಗಾಹುತಿಯಾಗಿ ಹಿಂದೆ ಬರುತ್ತಿದ್ದ ಕ್ಯಾಬ್ ಚಾಲಕ ಗಾಯಗೊಂಡಿರುವ ಘಟನೆ ಎಲೆಕ್ಟ್ರಾನಿಕ್‌ಸಿಟಿ ಬಳಿ ನಡೆದಿದೆ. ರವಿವಾರ ಮುಂಜಾನೆ 4ರ ಸುಮಾರಿಗೆ ಬೆಂಗಳೂರಿನಿಂದ ಹೊಸದಿಲ್ಲಿಗೆ ಮೆಟ್ರೋ ಬೋಗಿಯೊಂದನ್ನು ಕಂಟೈನರ್ ಮೂಲಕ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೋನಪ್ಪನ ಅಗ್ರಹಾರ ಜಂಕ್ಷನ್ ಬಳಿ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ. ಕಂಟೈನರ್ ಹಿಂಭಾಗದಲ್ಲಿ ಬರುತ್ತಿದ್ದ ಓಲಾ ಕ್ಯಾಬ್‌ಗೂ ಬೆಂಕಿ ತಾಕಿ ಕ್ಯಾಬ್‌ನಲ್ಲಿದ್ದ ಚಾಲಕನಿಗೆ ವಿದ್ಯುತ್ ಸ್ಪರ್ಶ ಉಂಟಾಗಿ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಅಗ್ನಿಶಾಮಕದಳವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳದವರು ಬೆಂಕಿ ನಂದಿಸಿ ವಿದ್ಯುತ್ ಕಡಿತಗೊಳಿಸಿ ಚಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News