×
Ad

ಸೀಡ್‌ಬಾಲ್ ಯೋಜನೆಗೆ ಸರಕಾರದ ಅನುದಾನವಿಲ್ಲ: ರಮಾನಾಥ ರೈ

Update: 2017-06-05 22:06 IST

ಬೆಂಗಳೂರು, ಜೂ.5: ಸೀಡ್‌ಬಾಲ್ ಯೋಜನೆಯನ್ನು ರಾಜ್ಯ ಸರಕಾರದ ಹಂತದಲ್ಲಿ ರೂಪಿಸಿಲ್ಲ. ಅಲ್ಲದೆ, ಯಾವುದೆ ಅನುದಾನವನ್ನು ಈ ಯೋಜನೆಗೆ ಒದಗಿಸಿಲ್ಲ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಎನ್.ಚೆಲುವರಾಯಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾರ್ಯಕ್ರಮವು ಸಾರ್ವಜನಿಕರ ಒಂದು ಸ್ವಯಂ ಪ್ರೇರಿತವಾದ ಕಾರ್ಯಕ್ರಮವಾಗಿದ್ದು, ರಾಜ್ಯ ಅರಣ್ಯ ಇಲಾಖೆಯು ಇದಕ್ಕೆ ಸಹಕಾರ ನೀಡುತ್ತಿದೆ ಎಂದರು.

ಅರಣ್ಯ ಇಲಾಖೆಯಲ್ಲಿ ಹಾಲಿ ಇರುವ ಮೂಲಭೂತ ಸೌಕರ್ಯವನ್ನು ಬಳಸಿಕೊಳ್ಳಲು ಸ್ಥಳೀಯವಾಗಿ ಅನುಕೂಲವನ್ನು ನೀಡಲಾಗುತ್ತಿದೆ. ಅಲ್ಲದೆ, ಸ್ಥಳೀಯ ಕಾಡುಜಾತಿಯ ಬೀಜಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಬೀಜದ ಉಂಡೆಯನ್ನು ಸಾರ್ವಜನಿಕರೆ ತಯಾರಿಸುತ್ತಾರೆ ಎಂದು ಅವರು ಹೇಳಿದರು.

ಈ ಸೀಡ್‌ಬಾಲ್‌ಗಳನ್ನು ಸ್ವಯಂ ಸೇವಕರು ಅರಣ್ಯ ಪ್ರದೇಶಗಳಲ್ಲಿ ಹಾಗೂ ನಾಲಾಗಳ ಬದುಗಳಲ್ಲಿ ಬಿತ್ತನೆ ಮಾಡಬಹುದಾಗಿದೆ. ಅರಣ್ಯ ಇಲಾಖೆ ಇದಕ್ಕೆ ವನಮಹೋತ್ಸವದ ಅಂಗವಾಗಿ ಅಗತ್ಯ ಸಹಕಾರವನ್ನು ನೀಡುತ್ತಿದೆ ಎಂದು ರಮಾನಾಥ ರೈ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News