×
Ad

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ-ದಿನಕರನ್ ಭೇಟಿ

Update: 2017-06-05 22:53 IST

ಬೆಂಗಳೂರು, ಜೂ.5: ಅಕ್ರಮ ಆಸ್ತಿಗಳಿಕೆ ಪ್ರಕರಣದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಂಕೆ ಮುಖಂಡನೂ ಆಗಿರುವ ಸಹೋದರ ಟಿವಿವಿ ದಿನಕರನ್ ಭೇಟಿ ಮಾಡಿದ್ದಾರೆ.

 ಸೋಮವಾರ ಹೊಸೂರು ಮುಖ್ಯರಸ್ತೆಯಲ್ಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಟಿವಿವಿ ಜೊತೆಗೆ ದಿನಕರನ್ ಪತ್ನಿ, ಸಂಬಂಧಿಕರು, ಶಾಸಕರಾದ ಇಂದುದೊರೈ, ಥಾನಾ ತಮಿಳು ಶೆಲ್ವನ್, ವೆಟ್ರಿವೇಲ್, ಪಾರ್ಥಿಬನ್, ಸುಬ್ರಮಣಿಯನ್, ಬಾಲಸುಬ್ರಮಣಿಯನ್, ತಂಗದೊರೈ, ಜಗ್ಗಯನ್, ಏಳುಮಲೈ, ಕದಿರ್ ಗಮು, ಜಯಂತಿ ಸೇರಿ 11ಕ್ಕೂ ಹೆಚ್ಚು ಜನ ಶಶಿಕಲಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಎಐಎಡಿಎಂಕೆ ಪಕ್ಷಕ್ಕೆ ಎರಡು ಹಸಿರೆಲೆ ಇರುವ ಪಕ್ಷದ ಚಿಹ್ನೆಯನ್ನು ಪಡೆಯುವ ಆರೋಪವನ್ನು ಹೊತ್ತ ಬಳಿಕ ಮೊದಲ ಬಾರಿಗೆ ದಿನಕರನ್ ಶಶಿಕಲಾ ಅವರನ್ನು ಕಾಣಲು ಬಂದಿದ್ದಾರೆ. ಪಕ್ಷದ ಚಿಹ್ನೆ, ಅಧಿಕಾರ ಎಲ್ಲವನ್ನೂ ಕಳೆದುಕೊಂಡಿರುವ ದಿನಕರನ್ ತಮ್ಮ ಮುಂದಿನ ನಡೆ ಬಗ್ಗೆ ಶಶಿಕಲಾ ಅವರಲ್ಲಿ ಸಲಹೆ ಪಡೆದುಕೊಂಡಿದ್ದಾರೆ. ಈ ನಡುವೆ ಸುಪ್ರೀಂಕೋರ್ಟ್ ಆದೇಶದಂತೆ ಶಶಿಕಲಾ ಅವರಿಗೆ ಧಾರ್ಮಿಕ ವಿಧಿಗಳನ್ನು ಪೂರೈಸಲು 30ದಿನಗಳ ಪೆರೋಲ್ ಲಭಿಸಿದೆ.

ಹೊಸದಿಲ್ಲಿಯ ತಿಹಾರ್ ಜೈಲಿನಲ್ಲಿ ಎರಡು ತಿಂಗಳುಗಳ ಕಾಲ ನೆಲೆಸಿದ್ದ ದಿನಕರನ್ ಅವರು ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News