ಸಿಪಿಎಂ ನಾಯಕರ ಮನೆಗಳಿಗೆ ಬಾಂಬೆಸೆತ: ಬಿಜೆಪಿ, ಆರೆಸ್ಸಿಗರ ವಿರುದ್ಧ ಕೇಸು ದಾಖಲು

Update: 2017-06-06 11:37 GMT
ಸಾಂದರ್ಭಿಕ ಚಿತ್ರ

ಕೂತ್ತುಪರಂಬ್,ಜೂ. 6: ಮಂಙಾಡಿಟ್ಟಂ ಮತ್ತು ಶಂಕರನೆಲ್ಲೂರಿನಲ್ಲಿ ಸಿಪಿಎಂ ನಾಯಕರ ಮನೆಗಳಿಗೆ ಬಾಂಬೆಸೆದ ಘಟನೆಯಲ್ಲಿ ಹತ್ತು ಮಂದಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕೂತ್ತುಪರಂಬ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಎರಡು ಘಟನೆಗೆ ಸಂಬಂಧಿಸಿ ಸುಜಿಲ್, ಲಿಧಿನ್, ನಿಧೀಶ್ ಸಹಿತ ಹತ್ತು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ರವಿವಾರ ರಾತ್ರಿ ಒಂಬತ್ತೂವರೆ ಗಂಟೆಗೆ ಶಂಕರನೆಲ್ಲೂರ್ ರಚನಾ ಶಾಖೆ ಸಿಪಿಎಂ ಕಾರ್ಯದರ್ಶಿ ಸಿಕೆ. ಚಂದ್ರನ್, ಶಂಕರನೆಲ್ಲೂರ್ ಸೌತ್ ಸಿಪಿಎಂ ನ ಮಾಜಿ ಶಾಖಾ ಕಾರ್ಯದರ್ಶಿ ಕೈಪ್ಪಚ್ಚೇರಿ ರಮೇಶ್ ಬಾಬು ಇವರಿಬ್ಬರ ಮನೆಗೆ ಬಾಂಬೆಸೆಯಲಾಗಿತ್ತು. ಮೊದಲು ಸಿಕೆ. ಚಂದ್ರನ್ ಮನೆಗೆ ಬಾಂಬೆಸೆಯಲಾಗಿದೆ.

ಸ್ಫೋಟದ ಪರಿಣಾಮ ತೀವ್ರವಾಗಿತ್ತು. ಮನೆಯ ಕಿಟಕಿ,ಬಾಗಿಲುಗಳಿಗೆ ಹಾನಿಯಾಗಿವೆ. ಮನೆಯ ಅಂಗಳದಲ್ಲಿ ಭಾರೀ ದೊಡ್ಡ ಗುಂಡಿಆಗಿದೆ. ಸಿಕೆ ಚಂದ್ರನ್(52),ಪತ್ನಿ ಸುಮತಿ(48), ಮಗನ ಪತ್ನಿ ದರ್ಶನಾ(20) ಕೂತ್ತುಪರಂಬ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರನ್‌ರ ಮನೆಗೆ ಬಾಂಬೆಸೆದ ಬಳಿಕ ಶಂಕರನೆಲ್ಲೂರ್ ನಾರ್ತ್‌ನಲ್ಲಿರುವ ರಮೇಶ್‌ಬಾಬು ಮನೆಗೂ ಬಾಂಬೆಸೆದಿದ್ದರು. ಮನೆಯ ಮುಂದಿನ ಮರಕ್ಕೆ ತಾಗಿ ಬಾಂಬ್ ಸ್ಫೋಟವಾದ್ದರಿಂದ ಭಾರೀ ದುರಂತ ತಪ್ಪಿದೆ. ರವಿವಾರ ಸಂಜೆ ಮಾಂಙಾಟ್ಟಿಡಂನಲ್ಲಿ ಡಿವೈಎಫ್‌ಐ ನಡೆಸಿದ್ದ ಬೀಫ್ ಫೆಸ್ಟ್ ವಿರುದ್ಧ ಸಿಟ್ಟಿನಲ್ಲಿ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News