ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಇಫ್ತಾರ್ ಮೀಟ್

Update: 2017-06-06 14:38 GMT

ಸೌದಿ ಅರೇಬಿಯಾ, ಜೂ.6: ಇಂಡಿಯನ ಸೋಶಿಯಲ್ ಫೋರಂ ಕರ್ನಾಟಕ ಘಟಕದ ವತಿಯಿಂದ ಅನಿವಾಸಿ ಭಾರತೀಯರಿಗಾಗಿ ಇಫ್ತಾರ್ ಮೀಟ್ ಬೈಶ್ ಅಲ್ ವಹಾ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಂ ಕಾರ್ಯನಿರ್ವಾಹಕ ಸದಸ್ಯ ಸಲೀಂ, ಪವಿತ್ರ ಕುರ್ ಆನ್ ಅವತ್ತೀರ್ಣಗೊಂಡ ತಿಂಗಳು ಇದಾಗಿದ್ದು, ಕುರ್ ಆನ್ ಮುಸ್ಲಿಮರಿಗೆ ಹಲವು ಜವಾಬ್ದಾರಿಗಳನ್ನು ತಿಳಿಸಿದೆ. ಏಕರೂಪ ನಾಗರಿಕ ಸಂಹಿತೆ, ತ್ರಿವಳಿ ತಲಾಖ್, ಗೋಹತ್ಯೆ ಮುಂತಾದ ವಿಚಾರಗಳಲ್ಲಿ ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ಆದ್ದರಿಂದ ನಾವು ಸಂವಿಧಾನಬದ್ಧ ಹೋರಾಟಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಂನ ಕಾರ್ಯನಿರ್ವಾಹಕ ಸದಸ್ಯರಾದ ಸಿದ್ದೀಕ್ ಉಪ್ಪಿನಂಗಡಿ, ಅರ್ಷಾದ್ ಪಡುಬಿದ್ರೆ, ಇಕ್ಬಾಲ್ ಕೂಳೂರು, ಕಲಂದರ್ ನೌಶಾದ್, ಝಹೀರ್ ಉಡುಪಿ ಭಾಗವಹಿಸಿದ್ದರು.

ಇರ್ಶಾದ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News