ಬೆಂಗಳೂರಿನಿಂದ ಮುರುಡೇಶ್ವರಕ್ಕೆ ನಾನ್ ಎಸಿ ಬಸ್
Update: 2017-06-07 21:17 IST
ಬೆಂಗಳೂರು, ಜೂ.7: ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಹೊಸದಾಗಿ ಜೂ.16 ರಿಂದ ಬೆಂಗಳೂರು-ಮುರುಡೇಶ್ವರಕ್ಕೆ ನಾನ್ ಎಸಿ ಸ್ಲೀಪರ್ ವಾಹನ ಸಂಚರಿಸಲಿದೆ.
www.ksrtc.inಬೆಂಗಳೂರಿನಲ್ಲಿ ರಾತ್ರಿ 9 ಕ್ಕೆ ಹೊರಡುವ ಬಸ್ ಹಾಸನ, ಮಂಗಳೂರು, ಕುಂದಾಪುರ, ಬೈಂದೂರು, ಶಿರೂರು ಮಾರ್ಗವಾಗಿ ಸಂಚರಿಸಿ ಬೆಳಗ್ಗೆ 9ಕ್ಕೆ ಮುರುಡೇಶ್ವರಕ್ಕೆ ತಲುಪಲಿದೆ. ಅನಂತರ ರಾತ್ರಿ 8.30 ಕ್ಕೆ ಮುರುಡೇಶ್ವರದಿಂದ ಹೊರಟು ಬೆಳಿಗ್ಗೆ 8.45 ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣ ದರ 825 ರೂ.ಗಳು ನಿಗದಿ ಮಾಡಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಲು 30 ದಿನಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 080-49596666 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಇ-ಟಿಕೇಟ್‌ಗಳು ಲಭ್ಯವಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.