×
Ad

ಕೊಲೆ ಪ್ರಕರಣ :ನಾಲ್ವರ ಬಂಧನ

Update: 2017-06-08 20:20 IST

ಬೆಂಗಳೂರು, ಜೂ.8: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್‌ಗೌಡ, ನವೀನ್‌ಕುಮಾರ್, ಮೋಹನ್ ಮತ್ತು ರಾಜು ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ರಾಜೇಶ್‌ಗೌಡ, ನವೀನ್‌ ಕುಮಾರ್, ಮೋಹನ್ ಮತ್ತು ರಾಜು ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ರಿಯಲ್ಎಸ್ಟೇಟ್ ವ್ಯವಹಾರ ಮತ್ತು ನೀರು ಶುದ್ಧೀಕರಣ ಘಟಕ ಹೊಂದಿದ್ದ ಜಯರಾಂ(48) ಎಂಬಾತ 10 ವರ್ಷದ ಹಿಂದೆ ಆಸ್ತಿಗಾಗಿ ತನ್ನ ಸಹೋದರಿಯನ್ನು ಕೊಲೆಗೈದಿದ್ದ. ಇದರಿಂದ ನೊಂದಿದ್ದ ಸಹೋದರಿ ಮಗ ರಾಜೇಶ್‌ಗೌಡ ಜಯರಾಂ ಮೇಲೆ ದ್ವೇಷ ಸಾಧಿಸುತ್ತಿದ್ದನು.

ಬುಧವಾರ ರಾತ್ರಿ 7:30 ಸುಮಾರಿಗೆ ಸಹಚರರೊಂದಿಗೆ ಸೇರಿ ರಾಜೇಶ್‌ಗೌಡ ಹೆಣ್ಣೂರು ಬಳಿ ಜಯರಾಂನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News