ದಿಲ್ಲಿ ದರ್ಬಾರ್

Update: 2017-06-10 18:26 GMT

ನಿರೀಕ್ಷೆಗೆ ವಿರುದ್ಧ ಯೆಚೂರಿ ನಿರೀಕ್ಷೆ
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪಶ್ಚಿಮ ಬಂಗಾಳದಿಂದ ಸತತ ಮೂರನೆ ಬಾರಿಗೆ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ತನ್ನ ಬೆಂಬಲವನ್ನೂ ಘೋಷಿಸಿದೆ. ಆದರೆ ಇಷ್ಟಾಗಿಯೂ ಎರಡು ಸಮಸ್ಯೆಗಳಿವೆ. ಸಿಪಿಎಂನಲ್ಲಿ ರಾಜ್ಯಸಭೆಗೆ ಎರಡು ಬಾರಿಗಿಂತ ಹೆಚ್ಚು ಸಲ ಅವಕಾಶ ನೀಡಿಲ್ಲ. ಮತ್ತೊಂದು ಸಮಸ್ಯೆಯೆಂದರೆ, ಪ್ರಕಾಶ್ ಕಾರಟ್ ನೇತೃತ್ವದ ಕೇಂದ್ರ ನಾಯಕತ್ವ, ಕಾಂಗ್ರೆಸ್ ಬೆಂಬಲಪಡೆಯುವ ಯೋಚನೆ ವಿರೋಧಿಸಿದ್ದಾರೆ. ಕಾರಟ್ ಅವರು ತಮ್ಮ ಕೆಲಸದಲ್ಲಿ ಅಡ್ಡಿಯಾಗುತ್ತಿದ್ದಾರೆ ಎಂದು ಯೆಚೂರಿ ಹೇಳಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಜೂನ್ 23 ಹಾಗೂ 24 ಯೆಚೂರಿ ಪಾಲಿಗೆ ಅತ್ಯಂತ ಮಹತ್ವದ ದಿನ. ಏಕೆಂದರೆ ಯೆಚೂರಿ ರಾಜ್ಯಸಭೆಗೆ ಸ್ಪರ್ಧಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಅಂದು ಕೇಂದ್ರ ಮಂಡಳಿ ನಿರ್ಧರಿಸುತ್ತದೆ. ಆದರೆ ಯೆಚೂರಿ ತಮ್ಮ ಆಸೆ ಕೈಬಿಟ್ಟಿಲ್ಲ. ತಾವು ರೇಸ್‌ನಲ್ಲಿರುವುದಾಗಿಯೇ ಹೇಳುತ್ತಿದ್ದಾರೆ.


ಅಧೀನ ಕೆಲಸಗಾರರ ಬಗ್ಗೆ ರಾಷ್ಟ್ರಪತಿ ಚಿಂತೆ
ರಾಷ್ಟ್ರಪತಿ ಅಭ್ಯರ್ಥಿಯ ಹೆಸರು ಘೋಷಣೆ ಬಗ್ಗೆ ತರಾತುರಿ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರೂ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಭರ್ಜರಿ ಲಾಬಿ ನಡೆದಿದೆ. ಹುದ್ದೆಯ ಆಕಾಂಕ್ಷಿಗಳು ಮತ್ತು ಲಾಬಿದಾರರು ವಿವರಗಳನ್ನು ಹೊರಗೆಡಹುವ, ಇತಿಹಾಸವನ್ನು ತಿರುವಿ ಹಾಕುವ ಸಾಹಸ ಮಾಡುತ್ತಿದ್ದಾರೆ. ಆದರೆ ಎರಡು ತಿಂಗಳಲ್ಲಿ ರಾಷ್ಟ್ರಪತಿ ಭವನ ತ್ಯಜಿಸಲು ಪ್ರಣವ್ ಮುಖರ್ಜಿ ಮಾತ್ರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎರಡು ರಾಯಭಾರಿ ಹುದ್ದೆಗಳೂ ಸೇರಿದಂತೆ ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಂದಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಅಧೀನ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬಹುತೇಕ ಎಲ್ಲರೂ ಹಣಕಾಸು ಸಚಿವಾಲಯದಿಂದ ರಾಷ್ಟ್ರಪತಿಗಳ ಜತೆ ರೈಸಿನಾ ಹಿಲ್‌ಗೆ ಬಂದವರು.


ರಾಧಾಮೋಹನ್ ಸಿಂಗ್ ಸಮಯಪ್ರಜ್ಞೆ
ಸಮಯ ಇನ್ನು ಕೆಡಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರ ತನ್ನ ಮೂರು ವರ್ಷಗಳಲ್ಲಿ ಮಾಡಿದ ಸಾಧನೆ ಎಂದು ಹೇಳಿಕೊಳ್ಳುವ ಎರಡು ಪುಟಗಳ ಜಾಹೀರಾತು ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸಿದವು. ವಿಚಿತ್ರವೆಂದರೆ ಅದೇ ದಿನದ ಪತ್ರಿಕೆಗಳಲ್ಲಿ, ಮಧ್ಯಪ್ರದೇಶದಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ರೈತರು ಮೃತಪಟ್ಟ ಸುದ್ದಿಗಳೂ ತುಂಬಿದ್ದವು. ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದ ಕಾರಣ ಕೃಷಿ ಸಚಿವಾಲಯದ ಮೂರು ವರ್ಷಗಳ ಸಾಧನೆಯನ್ನು ಬಿಂಬಿಸಲು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಪತ್ರಿಕಾಗೋಷ್ಠಿ ನಿಗದಿಪಡಿಸಿದ್ದರು. ಆದರೆ ಯಾರಿಂದ ಯಾವಾಗ ಆ ಸಲಹೆ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲ; ಮಂದ್‌ಸೋರ್ ಗೋಲಿಬಾರ್ ಬಗ್ಗೆ ಪ್ರಶ್ನೆ ಎದುರಾಗುವ ಸಾಧ್ಯತೆ ಇದೆ ಎನ್ನುವುದನ್ನು ಮನಗಂಡು ಪತ್ರಿಕಾಗೋಷ್ಠಿ ರದ್ದುಪಡಿಸಿದರು. ಇದರ ಬದಲಾಗಿ ಬಿಹಾರದ ಮೋತಿಹರಿಯಲ್ಲಿ ರಾಮದೇವ್ ಅವರ ಯೋಗಕ್ಕೆ ತೆರಳಿದರು. ಈ ಸಲಹೆ ಯಾರು ನೀಡಿದರು ಎನ್ನುವುದು ಗೊತ್ತಿಲ್ಲ. ಆದರೆ ಬಿಜೆಪಿ ಮುಖಂಡರಿಗೆ ಮಾತ್ರ ಸಚಿವರ ಈ ಕ್ರಮ ಇಷ್ಟವಾಗಿಲ್ಲ. ಪ್ರಧಾನಿ ವಿದೇಶದಿಂದ ವಾಪಸ್ ಬಂದ ಬಳಿಕ ಅವರ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದು ಊಹೆಗೆ ಬಿಟ್ಟದ್ದು.


ತಾಳಿ, ಇನ್ನೂ ಇದೆ
ಕಾಂಗ್ರೆಸ್ ಪಕ್ಷದ ಹಲವು ಯುವ ಮುಖಂಡರು ರಾಜ್ಯ ಘಟಕಗಳಲ್ಲಿ ಅಧಿಕಾರ ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಹಳೆತಲೆಗಳು ಇವರಿಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಅಕ್ಬರ್ ರಸ್ತೆಯ ನಂ. 24ರ ರಾಹುಲ್ ತಂಡಕ್ಕಾಗಿ ಅನುವು ಮಾಡಿಕೊಡಲು ಸಜ್ಜಾಗಿರುವ ಹಿರಿಯ ಎಐಸಿಸಿ ಪದಾಧಿಕಾರಿಯೊಬ್ಬರು, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ನಿದರ್ಶನವನ್ನು ಮುಂದಿಟ್ಟಿದ್ದಾರೆ. 70 ದಾಟಿರುವ ಸಿಂಗ್, ಪಂಜಾಬ್‌ನಲ್ಲಿ ಯಶಸ್ಸು ಸಾಧಿಸಿದ, ಹಿಮಾಚಲ ಪ್ರದೇಶದಲ್ಲಿ ಎರಡು ವರ್ಷ ಹಿಂದೆ ವೀರಭದ್ರ ಸಿಂಗ್ ಸಾಧನೆಯನ್ನು ಉದಾಹರಿಸುತ್ತಿದ್ದಾರೆ. ಹರ್ಯಾಣದಲ್ಲಿ, ದೀಪೇಂದ್ರ ಸಿಂಗ್ ಹೂಡಾ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳುವ ತರಾತುರಿಯಲ್ಲಿದ್ದರೆ, ಜ್ಯೋತಿರಾಧಿತ್ಯ ಸಿಂಧ್ಯಾ ಮಧ್ಯಪ್ರದೇಶ ಘಟಕದ ಮೇಲೆ ಕಣ್ಣಿಟ್ಟಿದ್ದಾರೆ, ಇವರು ಇನ್ನೂ ಸ್ವಲ್ಪಕಾಲ ಕಾಯಬೇಕಾಗಬಹುದು.


ಕಾಂಗ್ರೆಸ್‌ನ ಹೊಸ ತಲೆನೋವು
ಗುಜರಾತ್ ಕಾಂಗ್ರೆಸ್ ಮುಖಂಡ ಶಂಕರಸಿನ್ಹ ವಘೇಲಾ ಕೇಂದ್ರ ನಾಯಕತ್ವಕ್ಕೆ ಹೊಸ ತಲೆನೋವು ತಂದೊಡ್ಡಿದ್ದಾರೆ. ಅವರನ್ನೇ ಗುಜರಾತ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಆದರೆ ಕಾಂಗ್ರೆಸ್ ಅಗ್ರಗಣ್ಯ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಟ್ವಿಟರ್‌ನಲ್ಲಿ ಅನ್‌ಫಾಲೋ ಮಾಡಿದ್ದು ಕೂಡಾ ಯಾವ ಪ್ರಯೋಜನಕ್ಕೂ ಬರಲಿಲ್ಲ ಎನ್ನುವುದು ತಿಳಿದ ತಕ್ಷಣ ಮತ್ತೆ ಅನುಸರಿಸಿದ್ದಾರೆ. ಕಾಂಗ್ರೆಸ್ ವಿಭಜಿಸಿ ಮತ್ತೆ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ನಲ್ಲಿ ಕೆಲಮಟ್ಟಿಗೆ ಸಾಧನೆ ಉತ್ತಮಪಡಿಸಿಕೊಳ್ಳುವ ತವಕದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ‘ಬಾಪು’ ಅವರ ಬಂಡಾಯ ತಲೆನೋವು ತಂದಿದೆ. ಆದರೆ ಸ್ವಲ್ಪವೂ ತಡಮಾಡದೇ ಅವರ ಪ್ರತಿಸ್ಪರ್ಧಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್‌ಸಿಂಗ್ ಸೋಳಂಕಿ, ವಘೇಲಾ ಬ್ಲ್ಯಾಕ್‌ಮೇಲ್‌ಗೆ ಪಕ್ಷ ಮಣಿಯುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಮುಖಂಡರಿಗೆ ಅಲ್ಫೋನ್ಸಾ ಮಾವಿನಹಣ್ಣು ಕಳುಹಿಸುವ ಮೂಲಕ ಹಿರಿತಲೆಗಳ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅವರು ಮುಖಂಡರ ಮನವೊಲಿಸಲು ಯಶಸ್ವಿಯಾಗುತ್ತಾರೆಯೇ? ಮಾವಿನಹಣ್ಣಿಗೆ ವಘೇಲಾ ಬಲಿಯಾಗುತ್ತಾರೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News