ಪರಿಶಿಷ್ಟರ ಭಡ್ತಿ ಮೀಸಲಾತಿ ಸುಗ್ರೀವಾಜ್ಞೆ ಹೊರಡಿಸಲು ಆಗ್ರಹಿಸಿ ಜೂ. 13ರಂದು ಬೃಹತ್ ಧರಣಿ ಸತ್ಯಾಗ್ರಹ
ಬೆಂಗಳೂರು, ಜೂ. 12: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ಧಕ್ಕೆ ತಂದಿರುವ ಸುಪ್ರೀಂ ಕೋರ್ಟ್‌ನ ದುಷ್ಪರಿಣಾಮ ತಡೆಯಲು ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇ†ಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಇಂದು (ಜೂ.13) ನಗರದ ಪುರಭವನದ ಮುಂಭಾಗದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿರುವ ಧರಣಿಯಲ್ಲಿ ದಲಿತ ಮುಖಂಡರಾದ ಎನ್.ಮುನಿಸ್ವಾಮಿ, ಸಿ.ಎಂ.ಮುನಿಯಪ್ಪ, ಲಕ್ಷ್ಮಿನಾರಾಯಣ ನಾಗವಾರ, ಮಾವಳ್ಳಿ ಶಂಕರ್, ಡಿ.ಜಿ.ಸಾಗರ್, ಎನ್.ವೆಂಕಟೇಶ್, ವೆಂಕಟಸ್ವಾಮಿ, ಎನ್.ಮೂರ್ತಿ, ಅಣ್ಣಯ್ಯ, ವಿ.ನಾಗರಾಜ್, ಜಿಗಣಿ ಶಂಕರ್, ಎಂ.ಗುರುಮೂರ್ತಿ, ಹೆಣ್ಣೂರು ಶ್ರೀನಿವಾಸ್, ಎಂ.ಸೋಮಶೇಖರ್, ಚನ್ನಕೃಷ್ಣಪ್ಪ, ಶ್ರೀಧರ ಕಲಿವೀರ, ಎಂ.ಜಯಣ್ಣ, ರುದ್ರಪ್ಪ ಹನಗವಾಡಿ, ಎಚ್.ಎಂ.ರುದ್ರಸ್ವಾಮಿ, ಬಿ.ಎಂ.ಹನುಮಂತಪ್ಪ, ಹರಿಹರ ಆನಂದಸ್ವಾಮಿ, ನರಸಿಂಹಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಭಡ್ತಿ ಮೀಸಲಾತಿಗೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸೂಕ್ತ ವಕೀಲರನ್ನು ನೇಮಿಸಬೇಕು. ಕೇಂದ್ರ ಸರಕಾರ ಲೋಕಸಭೆಯಲ್ಲಿ ಸಂವಿಧಾನಕ್ಕೆ 117ನೆ ತಿದ್ದುಪಡಿ ಅನುಮೋದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಲಾಗುವುದು.
ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ವರ್ಗದ ಎಲ್ಲ ಸರಕಾರಿ ನೌಕರರು ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಸಹಕಾರಿಸಬೇಕು ಎಂದು ಕೆಇಬಿ ಎಸ್ಸಿ-ಎಸ್ಟಿ ಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ.ದಾಸ್ ಪ್ರಕಾಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.