ಕೀ ಉತ್ತರಗಳ ಪ್ರಕಟ
Update: 2017-06-12 22:09 IST
ಬೆಂಗಳೂರು, ಜೂ. 12: ಕರ್ನಾಟಕ ಲೋಕಸೇವಾ ಆಯೋಗವು ಆಯುಷ್ ಇಲಾಖೆಯ ಆಯುಷ್ ವೈದ್ಯಕೀಯ ಕಾಲೇಜುಗಳಲ್ಲಿನ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಆಯೋಗದ ವೆಬ್‌ಸೈಟ್: http://kpsc.kar.nic.in/Key Answersನಲ್ಲಿ ಕೀ ಉತ್ತರಗಳನ್ನು ನೀಡಿದ್ದು, ಈ ಕುರಿತು ಆಕ್ಷೇಪಣೆ ಸಲ್ಲಿಸುವ ಅಭ್ಯರ್ಥಿಗಳು ಅದನ್ನು ಪುಷ್ಟೀಕರಿಸುವ ಆಧಾರಗಳುಳ್ಳ ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಾಶನದ ಪ್ರತಿ, ವಿಷಯ, ಪ್ರಶ್ನೆ ಸಂಖ್ಯೆ ನಮೂದಿಸಿ ಪ್ರತಿ ಪ್ರಶ್ನೆಗೆ 50 ರೂ.ಗಳು ಶುಲ್ಕದೊಂದಿಗೆ(ಐಪಿಒ ಅಥವಾ ಡಿಡಿ ಮೂಲಕ) ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇಲ್ಲಿಗೆ ಜೂ.19 ರೊಳಗೆ ಸಲ್ಲಿಸಬೇಕು.