×
Ad

ಮನುಷ್ಯ ದ್ವೇಷಿ ಎಂದಿಗೂ ದೇವರನ್ನು ಪ್ರೀತಿಸಲಾರ: ರಮಾನಾಥ ರೈ

Update: 2017-06-13 22:45 IST

ಬೆಂಗಳೂರು, ಜೂ. 13: ‘ಮನುಷ್ಯರನ್ನು ದ್ವೇಷಿಸುವ ವ್ಯಕ್ತಿ ಯಾವುದೇ ಸಂದರ್ಭದಲ್ಲಿಯೂ ದೇವರನ್ನೂ ಎಂದಿಗೂ ಪ್ರೀತಿಸುವುದಿಲ್ಲ’ ಎಂದು ಅರಣ್ಯ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ‘ದೇವರ ಕಾಡು’ ವಿಚಾರದಲ್ಲಿ ಸರಕಾರ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಅವರು, ಹಿಂದೂಗಳನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ. ಮತ್ತೊಂದು ಧರ್ಮವನ್ನು ದ್ವೇಷ ಮಾಡುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.

ಕೋಮುಭಾವನೆ ಕೆರಳಿಸುವುದು ಅತ್ಯಂತ ಅಪಾಯಕಾರಿ. ಬಿಜೆಪಿಯವರು ವಸುದೈವ ಕುಟುಂಬ ಹಾಗೂ ಸನಾತನ ಹಿಂದೂಧರ್ಮ ಎಂದು ಹೇಳುತ್ತಾರೆ. ಆದರೆ, ಎಂದೂ ಹಾಗೇ ನಡೆದುಕೊಳ್ಳುವುದಿಲ್ಲ ಎಂದು ರಮಾನಾಥ ರೈ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News