×
Ad

2017ರ ಒಳಗಾಗಿ 9 ಸಾವಿರ ಲೈನ್‌ಮನ್ ಹುದ್ದೆಗಳು ಭರ್ತಿ: ಡಿ.ಕೆ.ಶಿವಕುಮಾರ್

Update: 2017-06-13 22:48 IST

ಬೆಂಗಳೂರು, ಜೂ.13: ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಒಂಭತ್ತು ಸಾವಿರ ಕಿರಿಯ ಮಾರ್ಗದಾಳು(ಲೈನ್‌ಮನ್), ಸಹಾಯಕ ಮಾರ್ಗದಾಳು ಹಾಗೂ ಮಾರ್ಗದಾಳುಗಳ ಹುದ್ದೆಗಳು ಖಾಲಿಯಿದ್ದು, ಈ ವರ್ಷದ ಒಳಗಾಗಿ ಭರ್ತಿ ಮಾಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಮೊದಲು 16 ಸಾವಿರ ಹುದ್ದೆಗಳು ಖಾಲಿ ಇದ್ದವು. ಅದರಲ್ಲಿ ಈಗಾಗಲೇ 7 ಸಾವಿರ ಹುದ್ದೆಗಳನ್ನು ಮುಂಭಡ್ತಿ ರೂಪದಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದ 9 ಸಾವಿರ ಹುದ್ದೆಗಳನ್ನು ಈ ವರ್ಷದ ಒಳಗಾಗಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಸದಸ್ಯರೊಬ್ಬರು ಎದ್ದು ನಿಂತು ಈ ಮಾರ್ಗದಾಳು ಎಂಬ ಹೆಸರನ್ನು ಬದಲಾಯಿಸಿ ಬೇರೆ ಹೆಸರನ್ನು ನಾಮಕರಣ ಮಾಡಬೇಕು ಎಂದಾಗ ಸಚಿವ ಡಿ.ಕೆ.ಶಿವಕುಮಾರ್ ಅವರು ಬೇರೆ ಹೆಸರುಗಳು ಇದ್ದರೆ ತಮ್ಮ ಗಮನಕ್ಕೆ ತನ್ನಿ ಬದಲಾಯಿಸೋಣ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News