×
Ad

ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ 16,37,632 ಲಕ್ಷ ಮನೆಗಳ ನಿರ್ಮಾಣ: ಎಂ.ಕೃಷ್ಣಪ್ಪ

Update: 2017-06-16 20:31 IST

ಬೆಂಗಳೂರು, ಜೂ.16: ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಯೋಜನೆಯಡಿಯಲ್ಲಿ 16,37,632 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 1,23,046 ಫಲಾನುಭವಿಗಳ ಮನೆಗಳ ಛಾಯಾಚಿತ್ರಗಳು ಅನರ್ಹಗೊಂಡಿದ್ದರಿಂದ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಡಾ.ಜಯಮಾಲ ರಾಮಚಂದ್ರ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅನರ್ಹಗೊಂಡಿರುವ ಫಲಾನುಭವಿಗಳು ಅರ್ಹವಿರುವುದು ಕಂಡು ಬಂದಲ್ಲಿ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಈವರೆಗೂ ಜಿಲ್ಲಾಡಳಿತದಿಂದ 46,937 ಅರ್ಜಿಗಳು ಸ್ವೀಕೃತವಾಗಿದ್ದು, 36,122 ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಹಾಗೂ ದಾಖಲೆಗಳು ಸರಿಯಿಲ್ಲದ ಕಾರಣ 10,815 ಅರ್ಜಿಗಳನ್ನು ಮರು ಪರಿಶೀಲನೆಗಾಗಿ ಹಿಂದುರುಗಿಸಲಾಗಿದ್ದು, ಮತ್ತೊಮ್ತೆ ಮರು ಪಸ್ತಾವನೆ ಸಲ್ಲಿಸಲು ಅವಕಾಶ ಇರುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News