×
Ad

ಸದಸ್ಯರ ಕೊರತೆ: ಕಲಾಪ ಮುಂದೂಡಿಕೆ

Update: 2017-06-16 21:24 IST

ಬೆಂಗಳೂರು, ಜೂ.16: ವಿಧಾನಸಭೆ ಕಲಾಪವನ್ನು ಸದಸ್ಯರ ಕೊರತೆ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸೇರುವಂತೆ ಸದನವನ್ನು ಮುಂದೂಡಲಾಗಿತ್ತು. ಆದರೆ, 3.50 ಆದರೂ ಕೋರಂಗೆ ಅಗತ್ಯವಿರುವಷ್ಟು ಸದಸ್ಯರು ಸದನಕ್ಕೆ ಆಗಮಿಸಿರಲಿಲ್ಲ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಶಾಸಕರ ಕೊರತೆಯು ಎದ್ದು ಕಾಣುತ್ತಿತ್ತು.

ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ಶುಕ್ರವಾರ ಪೂರ್ಣ ದಿನ ಕಲಾಪ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಭೋಜನ ವಿರಾಮದ ನಂತರ ಬಿಜೆಪಿಯಿಂದ ಇಬ್ಬರು, ಜೆಡಿಎಸ್‌ನಿಂದ ಇಬ್ಬರು ಮಾತ್ರ ಹಾಜರಿದ್ದರು.

ಪ್ರತಿಪಕ್ಷಗಳ ಸಾಲಿನಲ್ಲಿ ಕುರ್ಚಿಗಳು ಬಹುತೇಕ ಖಾಲಿಯಿದ್ದವು. ಈ ಸಂದರ್ಭದಲ್ಲಿ ಬೇಡಿಕೆಗಳ ಮೇಲೆ ಚರ್ಚೆ ನಡೆಸುವಂತೆ ಜೆಡಿಎಸ್ ಸದಸ್ಯ ಕೋನರೆಡ್ಡಿಗೆ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ರಮೇಶ್‌ಕುಮಾರ್, ವಿರೋಧ ಪಕ್ಷದ ನಾಯಕರು ಸೇರಿದಂತೆ ಯಾರೊಬ್ಬರೂ ಸದನದಲ್ಲಿ ಉಪಸ್ಥಿತರಿಲ್ಲ ಎಂದರು. ಪ್ರತಿಪಕ್ಷಗಳ ಸಾಲಿನಲ್ಲಿ ಕುರ್ಚಿಗಳು ಬಹುತೇಕ ಖಾಲಿಯಿದ್ದವು.

ಈ ಸಂದರ್ದಲ್ಲಿ ಬೇಡಿಕೆಗಳ ಮೇಲೆ ಚರ್ಚೆ ನಡೆಸುವಂತೆ ಜೆಡಿಎಸ್‌ ಸದಸ್ಯ ಕೋನರೆಡ್ಡಿಗೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ರಮೇಶ್‌ ಕುಮಾರ್, ವಿರೋಧ ಪಕ್ಷದ ನಾಯಕರು ಸೇರಿದಂತೆ ಯಾರೊಬ್ಬರೂ ಸದನದಲ್ಲಿ ಉಪಸ್ಥಿತರಿಲ್ಲ ಎಂದರು. ಪರಿಸ್ಥಿತಿ ಹೀಗಿರುವಾಗ ಸದಸ್ಯರು ಚರ್ಚೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಆದುದರಿಂದ, ಸದನವನ್ನು 10 ನಿಮಿಷಗಳ ಕಾಲ ಮುಂದೂಡಿ, ಪ್ರತಿಪಕ್ಷದ ನಾಯಕರು ಸೇರಿದಂತೆ ಇನ್ನಿತರ ಸದಸ್ಯರನ್ನು ಸಂಪರ್ಕಿಸಿ, ಸದನಕ್ಕೆ ಬರುವಂತೆ ತಿಳಿಸೋಣ ಎಂದು ರಮೇಶ್‌ಕುಮಾರ್ ಹೇಳಿದರು.

ವಿರೋಧ ಪಕ್ಷದ ನಾಯಕರು ಮಧ್ಯಾಹ್ನದ ಬಳಿಕ ಬರುವುದಿಲ್ಲ ಎಂದು ಹೇಳಿ ಹೋಗಿದ್ದಾರೆ ಎಂದು ಸದನದ ಗಮನಕ್ಕೆ ತಂದರು. ಆಗ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹಾಗೂ ರಮೇಶ್‌ಕುಮಾರ್ ಮನವಿ ಆಧರಿಸಿ ಸದನವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಸೇರುವಂತೆ ಸಭಾಧ್ಯಕ್ಷರು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News