ತಾಯಿ ಬೇಗ ಬರುತ್ತಾಳೆ, ದೊಡ್ಡ ಕಾರುಗಳನ್ನು ತರುತ್ತಾಳೆ ಎಂದು ತಮ್ಮಂದಿರಿಗೆ ಹೇಳುತ್ತಿದ್ದೆ: ತಸ್ಲೀಮಾ

Update: 2017-06-17 10:11 GMT

ನನ್ನ ಭೌತಶಾಸ್ತ್ರ ಪರೀಕ್ಷೆಯ ಮುನ್ನಾ ದಿನ ನನ್ನ ತಾಯಿ ಜೋರ್ಡಾನ್ ಗೆ ತೆರಳಿದ್ದರು. ಆ ರಾತ್ರಿ ನಾವು ಎಚ್ಚರದಿಂದಿದ್ದೆವು. ನನ್ನ ತಾಯಿ ನನ್ನ ಮೇಲೊರಗಿ ಅಳುತ್ತಿದ್ದಳು. ಭೌತಶಾಸ್ತ್ರದ ಪುಸ್ತಕ ನನ್ನ ತೊಡೆಯ ಮೇಲಿತ್ತು. ಮರುದಿನ ನನ್ನ ಎಸ್ಸೆಸ್ಸಿ ಪರೀಕ್ಷೆಯಿತ್ತು, ಆದರೂ ನನ್ನ ತಾಯಿ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿದ್ದರು. ನಮ್ಮನ್ನು ರಕ್ಷಿಸಲು ಆಕೆ ಹೋಗಲೇ ಬೇಕಿತ್ತು.

ಎಲ್ಲವೂ ಸರಿಯಾಗುವುದೆಂದು ನಾನು ಆಕೆಗೆ ಭರವಸೆ ನೀಡಿದೆ. ನಾನು ಎಲ್ಲವನ್ನು ನಿಭಾಯಿಸಬಲ್ಲೆ ಎಂದೂ ಹೇಳಿದೆ. ಆಕೆಯನ್ನು ನಿಲ್ದಾಣಕ್ಕೆ ಕಳುಹಿಸಿದ ನಂತರ ನಾನು ಪರೀಕ್ಷೆಗೆ ಹಾಜರಾಗಲು ಹೋದೆ. ಮನೆಗೆ ಹಿಂದಿರುಗಿದಾಗ ಎಲ್ಲವೂ ಖಾಲಿಯಾದ ಅನುಭವವಾಯಿತು, ಮನೆಯಲ್ಲಿ ಜೀವಕಳೆಯೇ ಇರಲಿಲ್ಲ. ಆಕೆಯಿಲ್ಲದೆ ನಾನು ಯಾವತ್ತೂ ಮಲಗಿರಲೇ ಇಲ್ಲ. ನನ್ನ ಇಬ್ಬರು ಸಹೋದರರೊಂದಿಗೆ ಆ ಮನೆಯಲ್ಲಿ ಒಬ್ಬಳೇ ಮಲಗಲು ನನಗೆ ತುಂಬಾ ಹೆದರಿಕೆಯಾಯಿತು. ಅವರು ಇಡೀ ರಾತ್ರಿ ಅಳುತ್ತಿದ್ದರೆ ನನಗೆ ಅಳಲು ಸಮಯವಿರಲಿಲ್ಲ.

ನನಗೆ ಇನ್ನು ಮುಂದೆ ಅಳಲೂ ಸಾಧ್ಯವಿಲ್ಲ. ನನ್ನ ತಮ್ಮಂದಿರನ್ನು ಮದರಸಾಗೆ ಕಳುಹಿಸಿಕೊಟ್ಟು ನಾನು ಕಾಲೇಜಿಗೆ ಹೋಗುತ್ತಿದ್ದೆ. ತಾಯಿ ಹೋಗಿ ಹಲವಾರು ದಿನಗಳ ನಂತರ ನಾನು ಕಾಡಿಗೆ ಹೋಗಿ ಅಡುಗೆಗಾಗಿ ತರಕಾರಿ ತಂದೆ. ನನ್ನ ತಮ್ಮಂದಿರಿಗೆ ಆಹಾರ ತಯಾರಿಸಿ, ಬಟ್ಟೆ ಒಗೆದು ನಾನು ಕಷ್ಟ ಪಟ್ಟು ಓದುತ್ತಿದ್ದೆ. ಎಸ್ಸೆಸ್ಸಿಯಲ್ಲಿ ನನಗೆ ಗೋಲ್ಡನ್ ಜಿಪಿಎ 5 ದೊರೆತಾಗ ನನಗೆ ತಾಯಿಯನ್ನು ಬಿಗಿದಪ್ಪಿ ಆಕೆಗಾಗಿ ನಾನು ಈ ಸಾಧನೆ ಮಾಡಿದೆ ಎಂದು ಹೇಳಬೇಕೆನಿಸಿತು. ಆದರೆ ನಮಗೆ ಆಕೆಯೊಂದಿಗೆ ಒಂದು ತಿಂಗಳ ಕಾಲ ಸಂಪರ್ಕ ಸಾಧ್ಯವಾಗಲಿಲ್ಲ.

ಕೆಲವೊಮ್ಮೆ ನನಗೆ ಹತಾಶೆಯಾಗುತ್ತಿತ್ತು. ಜೀವನ ಸುಲಭವಾಗಿದ್ದರೆ ಅಥವಾ ಸುಂದರವಾಗಿದ್ದರೆ ಒಳ್ಳೆಯದಿತ್ತು ಎಂದು ಅನಿಸುತ್ತಿತ್ತು. ನನ್ನ ತಮ್ಮಂದಿರಿಗೆ ಆಹಾರ ನಿಡುವಾಗ ಅವರಿಗೆ ನಮ್ಮ ಕನಸುಗಳ ಬಗ್ಗೆ ಹೇಳುತ್ತಿದ್ದೆ. ನಮ್ಮ ತಾಯಿ ಬೇಗನೇ ಬರುತ್ತಾಳೆ, ಅವರಿಗೆ ದೊಡ್ಡ ಕಾರುಗಳನ್ನು ತರುತ್ತಾರೆ, ಜಾವೇದನ ಕಣ್ಣಿನ ಶಸ್ತ್ರಕ್ರಿಯೆಗೆ ಸಾಕಷ್ಟು ಹಣ ನಮ್ಮಲ್ಲಿರುತ್ತದೆ ಹಾಗೂ ಅವರಿಗಾಗಿ ಒಂದು ದಿನ ಚಿಕನ್ ತರುತ್ತೇನೆ ಎಂದು ನಾನು ಆವರಿಗೆ ಹೇಳುತ್ತಿದ್ದೆ. ಅವರು ಸುಮ್ಮನೆ ನಗುತ್ತಿದ್ದರು ಹಾಗೂ ನಾನು ಹೇಳಿದ್ದೆಲ್ಲವನ್ನೂ ನಂಬಿ ಬಿಡುತ್ತಿದ್ದರು.

ಅವರಿಗೆ ನಾನು ಸುಳ್ಳು ಹೇಳುವುದಿಲ್ಲವೆಂದು ಗೊತ್ತಿತ್ತು, ನಾನು ಅವರನ್ನು ಎಷ್ಟು ಪ್ರೀತಿಸುತ್ತೇನೆಂದೂ ಗೊತ್ತು. ರಾತ್ರಿ ಕಳೆದು ಬೆಳಕು ಮೂಡಿದಾಗ ಮತ್ತೆ ನಮ್ಮ ಜೀವನದಲ್ಲಿ ಬೆಳಕು ಮೂಡುವುದು ಎಂಬ ಭರವಸೆಯೊಂದಿಗೆ ಹಾಗೂ ಕನಸುಗಳೊಂದಿಗೆ ಪ್ರತಿ ರಾತ್ರಿ ಭಯವಿಲ್ಲದೆ ನಾನು ನಿದ್ದೆ ಮಾಡಬಲ್ಲೆ.

- ತಸ್ಲೀಮಾ

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News