×
Ad

ದರೋಡೆ ಪ್ರಕರಣ:ವಜಾಗೊಂಡಿದ್ದ ಎಸ್ಸೈ ಬಂಧನ

Update: 2017-06-17 21:30 IST

ಬೆಂಗಳೂರು, ಜೂ.17: ಸೇವೆಯಿಂದ ವಜಾಗೊಂಡಿದ್ದ ಎಸ್ಸೈಯೋರ್ವ ತನ್ನ ಸಹೋದರರೊಂದಿಗೆ ದರೋಡೆ, ಕಳ್ಳತನ ಸೇರಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸೇವೆಯಿಂದ ವಜಾಗೊಂಡ ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ್, ಮಂಜುನಾಥ್, ಅಶೋಕ್ ಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ: 1987ರಲ್ಲಿ ಸಿಐಎಸ್‌ಎಫ್‌ಗೆ ಎಎಸ್ಸೈ ಹುದ್ದೆಗೆ ಸೇರಿದ ಚಂದ್ರಶೇಖರ್, ಎಸ್ಸೈ ಆಗಿ ಕರ್ತವ್ಯನಿರ್ವಹಿಸಿ 2001ನೆ ಸಾಲಿನಲ್ಲಿ ಸೇವೆಯಿಂದ ವಜಾಗೊಂಡಿದ್ದರು. ಈ ಸಂದರ್ಭದಲ್ಲಿ ತನ್ನ ಸಹೋದರರಾದ ಮಂಜುನಾಥ ಮತ್ತು ಅಶೋಕ್‌ಕುಮಾರ್ ಅವರೊಂದಿಗೆ ತಂಡಕಟ್ಟಿಕೊಂಡು ದರೋಡೆ, ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದರು ಎಂದು ಸಿಸಿಬಿ ತಿಳಿಸಿದೆ.

ಆರೋಪಿಗಳು ನಾಗಸಂದ್ರದಲ್ಲಿ ಇದ್ದಾರೆಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ ಮೂವರನ್ನು ಬಂಧಿಸಿದ್ದಾರೆ. ಚಂದ್ರಶೇಖರ್ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ ಚನ್ನಪಟ್ಟಣ ಗ್ರಾಮಾಂತರ ಠಾಣೆ, ಎಲೆಕ್ಟ್ರಾನಿಕ್‌ಸಿಟಿ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇನ್ನೂ ಪ್ರಕರಣ ಸಂಬಂಧ ಜೀವನ್‌ಭೀಮಾನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ಮಂಜುನಾಥ್ ಮತ್ತು ಅಶೋಕ್‌ಕುಮಾರ್ ಹೆಸರು ಉಲ್ಲೇಖಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News