ನಕಲಿ ಆಧಾರ್‌ಕಾರ್ಡ್: ನಾಲ್ವರ ಸೆರೆ
Update: 2017-06-17 21:34 IST
ಬೆಂಗಳೂರು, ಜೂ.17: ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಇಲ್ಲಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಯಲಹಂಕದ ಮೋಹನ್ ಕುಮಾರ್, ಪ್ರದೀಪ್, ಮಲ್ಲಪ್ಪಮತ್ತು ದೇವರಾಜ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಸರಕಾರ ಸಚಿವಾಲಯದ ನಕಲಿ ಲೆಟರ್ ಹೆಡ್ ತಯಾರಿಸಿಕೊಂಡು, ಗೆಜೆಟೆಡ್ ಅಧಿಕಾರಿಯ ನಕಲಿ ಸಹಿ ಮಾಡುತ್ತಿದ್ದ ಆರೋಪಿಗಳು ಹಲವಾರು ಮಂದಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.