×
Ad

ಟಿಪ್ಪು ಸುಲ್ತಾನ್ : ಪತ್ರ-3

Update: 2017-06-18 15:22 IST

ಯಾರು ನನ್ನ ಜನರು? ಎಲ್ಲರೂ ನನ್ನವರೇ

ದೇವಾಲಯದಲ್ಲಿ ಗಂಟಾನಾದ ಮಾಡುತ್ತಿರುವವರು

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವವರು

ಎಲ್ಲರೂ ನನ್ನ ಜನರೆ.

ಈ ನಾಡು ನನ್ನದು ಮತ್ತು ಅವರದು.ಈ ದಿನದಿಂದಲೇ ಘೋಷಿಸುತ್ತಿದ್ದೇನೆ.

ಮೈಸೂರಿನ ಸಾಮ್ರಾಜ್ಯದಲ್ಲಿ ಯಾರೂ ಕೂಡ

ಧರ್ಮ, ಜಾತಿ ಮತ್ತು ಕುಲದ ಆಧಾರದ ಮೇಲೆ ಭೇದ ಭಾವ ಮಾಡುವಂತಿಲ್ಲ.

ನಾವು ಕುರ್‌ಆನ್‌ನಲ್ಲಿ ನಂಬಿಗೆ ಇಟ್ಟಿದ್ದೇವೆ.

ಅದರ ನುಡಿಗಟ್ಟಿನಂತೆ ನಡೆಯುತ್ತೇವೆ. ನಮಗೆ ಅದು

ಏನನ್ನು ತಿಳಿಹೇಳಿದೆಯೋ, ನಿಮಗೂ ಅದನ್ನೇ ಹೇಳಿದೆ.

ನಮ್ಮ ಮತ್ತು ನಿಮ್ಮ ದೇವರು ಒಬ್ಬನೇ. ಅವನಿಗೆ ಶರಣಾಗೋಣ.

ಏಕೆಂದರೆ ದೇವರ ಕಾನೂನು ನಮ್ಮ ಹೃದಯಗಳಿಗೆ ಪ್ರೀತಿ ಪಾತ್ರವಾಗಿದೆ.

ಮಾನವನ ಘನತೆ ತರ್ಕ ಸಹೋದರತ್ವವನ್ನು ಆಧರಿಸಿದೆ.

ಅಪಾರಗೌರವದಿಂದ ನಾನು ಹಿಂದೂಗಳ ವೇದವನ್ನೂ ಓದಿದ್ದೇನೆ.

ನಾಮ ಹಲವು ಇದ್ದರೂ ದೇವನೊಬ್ಬನೆ. ಸಾರುವ

ವೇದಗಳು ಮಾನವ ಏಕತೆಯ ವಿಶ್ವಾಸವಿರಿಸಿವೆ.

ಧಾರ್ಮಿಕ ಸಹಿಷ್ಣುತೆಯೇ ಪವಿತ್ರ ಕುರ್‌ಆನಿನ ಮೂಲ ತತ್ವವಾಗಿದೆ.

Writer - ಡಾ. ಲಕ್ಷ್ಮೀಪತಿ .ಸಿ.ಜಿ

contributor

Editor - ಡಾ. ಲಕ್ಷ್ಮೀಪತಿ .ಸಿ.ಜಿ

contributor

Similar News