ಮೆಟ್ರೋ ರೈಲು ಸಂಚಾರಕ್ಕೆ ಮುಗಿಬಿದ್ದ ಜನ

Update: 2017-06-18 14:27 GMT

ಬೆಂಗಳೂರು, ಜೂ.18: ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ ಕನಕಪುರ ರಸ್ತೆಯ ಯಲಚೇನಹಳ್ಳಿ ಮಾರ್ಗದ ಮೊದಲ ಹಂತದ ‘ಹಸಿರು’ ನಮ್ಮ ಮೆಟ್ರೋ ರೈಲು ರವಿವಾರ ಸಂಜೆ 4ಗಂಟೆಯಿಂದ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಂಡಿದ್ದು, ಉದ್ಯಾನನಗರಿಯ ಜನತೆ ಮೆಟ್ರೋ ಸಂಚಾರಕ್ಕೆ ಅಕ್ಷರಶಃ ಮುಗಿಬಿದ್ದಿತ್ತು. ರವಿವಾರ ರಜೆ ದಿನವಾಗಿರುವುದರಿಂದ ನಮ್ಮ ಮೆಟ್ರೋ ಮೊದಲ ಸಂಚಾರದ ಅನುಭವವನ್ನು ಸವಿಯಬೇಕೆಂದು ನಗರದ ಜನತೆ ಬೆಳಗ್ಗೆಯಿಂದಲೇ ಮೆಟ್ರೋ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು. ಆದರೆ, ಮೆಟ್ರೋ ರೈಲು ಸಂಜೆ 4ಗಂಟೆಗೆ ಪ್ರಾರಂಭವಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ರೈಲು ಸಂಪೂರ್ಣ ಭರ್ತಿಯಾಯಿತು.

ಹರ್ಷೊದ್ಘಾರದ ಪ್ರಯಣ: ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ಜನತೆ ನಮ್ಮ ಮೆಟ್ರೋ ರೈಲಿನಲ್ಲಿ ಕಾಲಿಡುತ್ತಿದ್ದಂತೆ ಹರ್ಷೊದ್ಘಾರದಿಂದ ಕೂಗಾಡಿದರು. ಅಲ್ಲದೆ, ಚಪ್ಪಾಳೆ ತಟ್ಟಿ, ಕೇಕೆಗಳನ್ನು ಹಾಕುವ ಮೂಲಕ ಪ್ರಯಾಣ ಬೆಳೆಸಿದರು. ಕೆಲವು ಪ್ರಯಾಣಿಕರು ಮೆಟ್ರೋ ರೈಲಿನ ವೇಗ ಹಾಗೂ ಸೌಂದರ್ಯವನ್ನೂ ಸಹ ಪ್ರಯಾಣಿಕರೊಂದಿಗೆ ಚರ್ಚಿಸುತ್ತಿದ್ದರು.

ವಾಹನ ದಟ್ಟಣೆಯಿಂದಾಗಿ ನಗರದಲ್ಲಿ ಸಂಚರಿಸುವುದಕ್ಕೆ ಬೇಸರವಾಗುತ್ತಿತ್ತು. ಯಾವಾಗ ನಮ್ಮ ಮೆಟ್ರೋ ರೈಲು ಪ್ರಾರಂಭವಾಗುತ್ತದೆಯೇ ಎಂದು ಕಾಯುತ್ತಿದ್ದೆವು. ಈಗ ನಮ್ಮ ಕನಸು ನನಸಾಗಿದೆ. ಮೆಟ್ರೋ ರೈಲಿನಲ್ಲಿ ಹತ್ತು ಕಿ.ಮೀಗಳನ್ನು ಕೆಲವೇ ನಿಮಿಷಗಳಲ್ಲಿ ಮುಟ್ಟುತ್ತೇವೆ ಎಂಬುದನ್ನು ನೆನೆಸಿಕೊಂಡರೆ ಖಷಿಯಾಗುತ್ತದೆ’ ಎಂದು ಪ್ರಯಾಣಿಕ ಸಂತೋಷ್ ಹರ್ಷ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News