ರಿಯಾಝ್ ಮೌಲವಿ ಕೊಲೆ ಪ್ರಕರಣ: ಇಂದು ಆರೋಪ ಪಟ್ಟಿ ಸಲ್ಲಿಕೆ

Update: 2017-06-19 08:15 GMT

ಕಾಸರಗೋಡು,ಜೂ. 19: ಹಳೆಚೂರಿಯ ಮದ್ರಸ ಅಧ್ಯಾಪಕ, ಕೊಡಗಿನ ಮುಹಮ್ಮದ್ ರಿಯಾಝ್ ಮೌಲವಿ ಕೊಲೆ ಪ್ರಕರಣದ ಆರೋಪಪಟ್ಟಿಯನ್ನು ವಶೇಷ ತನಿಖಾ ತಂಡವು ಇಂದು ಸಲ್ಲಿಸಲಿದೆ. ವಿಶೇಷ ತನಿಖಾ ತಂಡದ ತಳಿಪ್ಪರಂಬ್ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಕೆ.ಸುಧಾಕರನ್ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ(ಒಂದು) ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಿದ್ದಾರೆ. ಕ್ರೈಂಬ್ರಾಂಚ್ ಎಸ್ಪಿ ಡಾ.ಎ. ಶ್ರೀನಿವಾಸನ್‌ರ ನೇತೃತ್ವದಲ್ಲಿ ರಿಯಾಝ್ ಮೌಲವಿ ಕೊಲೆಪ್ರಕರಣದ ತನಿಖೆ ನಡೆದಿತ್ತು.

ಕೋಮುಗಲಭೆ ಸೃಷ್ಟಿಸಲಿಕ್ಕೆ ಯೋಜನೆ ರೂಪಿಸಿದ ಘಟನೆ ಇದಾದ್ದರಿಂದ ಗೃಹಇಲಾಖೆ ವಿಶೇಷ ಅನುಮತಿ ಪಡೆದು ಆರೋಪ ಪಟ್ಟಿಯನ್ನು ತಯಾರಿಸಲಾಗಿದೆ. ಸರಕಾರ ನಿಯೋಜಿಸಿದ ಸ್ಪೆಶಲ್ ಪ್ರಾಸಿಕ್ಯೂಟರ್ ಅಡ್ವೊಕೇಟ್ ಎಂ. ಅಶೋಕನ್‌ರೊಂದಿಗೆ ಕ್ರೈಂಬ್ರಾಂಚ್ ಎಸ್ಪಿ ಡಾ.ಎ. ಶ್ರೀನಿವಾಸನ್ ಸಮಾಲೋಚನೆ ನಡೆಸಿದ ಬಳಿಕ ಆರೋಪಪಟ್ಟಿಗೆ ಅಂತಿಮರೂಪ ನೀಡಲಾಗಿದೆ. 2017 ಮಾರ್ಚ್ 20ಕ್ಕೆ ಮಧ್ಯರಾತ್ರಿ ಮಸೀದಿಯ ಕೋಣೆಗೆ ನುಗ್ಗಿ ರಿಯಾಝ್ ಮೌಲವಿಯವರನ್ನು ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News