ಬೈಕ್‌ಗೆ ಲಾರಿ ಢಿಕ್ಕಿ: ವ್ಯಕ್ತಿ ಸಾವು
ಬೆಂಗಳೂರು, ಜೂ.19: ಶರವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಾಪ್ತಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೋಣನಕುಂಟೆಯ ಚಿಕ್ಕನಗೌಡ(65) ಮೃತಪಟ್ಟ ವ್ಯಕ್ತಿಯೊಂದು ಪೊಲೀಸರು ತಿಳಿಸಿದ್ದಾರೆ. ಇದೇ ಘಟನೆಯಲ್ಲಿ ಮನು(22) ಎಂಬುವರು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ: ಕುಮಾರಸ್ವಾಮಿ ಲೇಔಟ್‌ನಲ್ಲಿ ಕೆಲಸ ಮುಗಿಸಿಕೊಂಡು ಉತ್ತರಹಳ್ಳಿಯ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ರವಿವಾರ ರಾತ್ರಿ 8:30ರ ಸುಮಾರಿಗೆ ಮೊಮ್ಮಗ ಮನು ಬೈಕ್‌ನಲ್ಲಿ ಹಿಂದೆ ಕುಳಿತುಕೊಂಡು ಚಿಕ್ಕನಗೌಡ ಹೋಗುತ್ತಿದ್ದರು.
ಮಾರ್ಗಮಧ್ಯೆ ನಗರದ ಇಟ್ಟಮಡು ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದು ಲಾರಿಯಡಿ ಸಿಕ್ಕ ಚಿಕ್ಕನಗೌಡ ಮೃತಪಟ್ಟರೆ, ಪಕ್ಕಕ್ಕೆ ಬಿದ್ದ ಮನು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಲಾರಿ ಚಾಲಕ ರಶೀದ್‌ನನ್ನು ಬಂಧಿಸಿ, ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.