ಬಾಲ್ಯ ವಿವಾಹ ಬೆಂಬಲಿಸುವವರ ಮೇಲೆ ಸ್ವಯಂಪ್ರೇರಿತ ದೂರು: ಉಮಾಶ್ರೀ
Update: 2017-06-19 20:48 IST
ಬೆಂಗಳೂರು, ಜೂ.19: ಬಾಲ್ಯ ವಿವಾಹವನ್ನು ಬೆಂಬಲಿಸುವವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲು ಪೊಲೀಸ್ ಇಲಾಖೆಗೆ ಅಧಿಕಾರ ನೀಡಲಾಗಿದೆ ಎಂದು ಮಾಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಸೋಮವಾರ ವಿಧಾನಪರಿಷತ್‌ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ಗುಲ್ಬರ್ಗಾ, ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುತ್ತುಕಟ್ಟುವುದು: ಉತ್ತರ ಕರ್ನಾಟಕದಲ್ಲಿ ಮುತ್ತುಕಟ್ಟುವ ಪದ್ಧತಿಯಿಂದಾಗಿ ಸಾವಿರಾರು ದಲಿತ ಯುವತಿಯರ ಬದುಕು ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುತ್ತುಕಟ್ಟುವ ಪದ್ಧತಿಯ ವಿರುದ್ಧ ಮನೆ-ಮನೆಗೂ ಜಾಗೃತಿ ಮೂಡಿಸುವಂತಹ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.