ಯುವ ಕಾಂಗ್ರೆಸ್‌ನಿಂದ ಸಸಿಗಳ ವಿತರಣೆ
ಬೆಂಗಳೂರು, ಜೂ.19: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಇಲ್ಲಿನ ವಿವೇಕನಗರದ ಶಾಲೆಯ ಮಕ್ಕಳಿಗೆ 300 ಸಸಿಗಳನ್ನು ವಿತರಣೆ ಮಾಡಲಾಯಿತು.
ಸಮಿತಿಯ ನೂತನ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸದಸ್ಯರು ವಿವೇಕನಗರದ ಸೇವಾಭಾರತ ಟ್ರಸ್ಟ್ ಸರಕಾರಿ ಕನ್ನಡ, ತುಳು, ತೆಲುಗು ಹಿರಿಯ ಪ್ರಾಥಮಿಕ ಶಾಲೆಗೆ 300 ಸಸಿಗಳನ್ನು ವಿತರಿಸಿದರು. ಇದೇ ವೇಳೆ ಎನ್.ಎ.ಹಾರಿಸ್ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ 500 ಶಾಲಾ ಕಿಟ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಯುವ ಕಾಂಗ್ರೆಸ್ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮತು ್ತಎನ್.ಎ. ಹಾರಿಸ್ ಪ್ರತಿಷ್ಠಾನದ ನಿರ್ದೇಶಕರಾದ ಮುಹಮ್ಮದ್ ಹಾರಿಸ್ ನಳಪಡ್ ಮಾತನಾಡಿ, ಮಕ್ಕಳು ಗಿಡಗಳ ಆರೈಕೆಯಲ್ಲಿ ತೊಡಗಿದರೆ ಪರಿಸರದೊಂದಿಗೆ ಅವರ ಸಂಬಂಧ ಗಟ್ಟಿಗೊಳ್ಳಲಿದೆ ಎಂದು ತಿಳಿಸಿದರು.
ಬಸನಗೌಡ ಬಾದರ್ಲಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಯುವ ಕಾಂಗ್ರೆಸ್ ಪ್ರೋತ್ಸಾಹದ ಜೊತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಗಿದೆ. ರಾಜ್ಯದ ಎಲ್ಲ ಶಾಲೆಗಳೂ ಈ ಕಾರ್ಯಕ್ರಮ ಹಮ್ಮಿಕೊಂಡರೆ ಆರೋಗ್ಯಕಾರಿ ಪರಿಸರವನ್ನು ರೂಪಿಸಬಹುದು ಎಂದರು.
ರಾಜ್ಯಯುವ ಕಾಂಗ್ರೆಸ್ ಮುಖಂಡ ಮಂಜು, ಹರ್ಷಗೌಡ, ಲೋಹಿತ್, ಹರ್ಷ, ಮತ್ತು ಆರ್.ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.