1.10 ಲಕ್ಷ ಯುವ ಜನತೆಗೆ ತಾಂತ್ರಿಕ ತರಬೇತಿ: ಪ್ರಿಯಾಂಕ್ ಖರ್ಗೆ
Update: 2017-06-19 20:59 IST
ಬೆಂಗಳೂರು, ಜೂ.19: ರಾಜ್ಯಾದ್ಯಂತ ಉದ್ಯೋಗಾವಕಾಶವನ್ನು ಹೆಚ್ಚಿಸಲು ಯುವ-ಯುಗ ಅಡಿಯಲ್ಲಿ ಕೈಗಾರಿಕಾ ಆಧಾರಿತ ತಾಂತ್ರಿಕ ತರಬೇತಿಯನ್ನು 1.10 ಲಕ್ಷ ಯುವ ಜನತೆಗೆ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬದಲಿಗೆ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ತಾಂತ್ರಿಕ ಶಿಕ್ಷಣ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ಮನದಲ್ಲಿರಿಸಿಕೊಂಡು ಕಿಯೋನಿಕ್ಸ್ ಸಂಸ್ಥೆಯು ಈಗಾಗಲೇ 25100 ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ. ಉದ್ಯೋಗ ಅವಕಾಶವನ್ನು ಹೆಚ್ಚಿಸಲು ಯುವ-ಯುಗ ಅಡಿಯಲ್ಲಿ 1.10 ಲಕ್ಷ ಯುವ ಜನತೆಗೆ ಕೈಗಾರಿಕಾ ಆಧಾರಿತ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.